ಹೊಸದಿಗಂತ ವಿಜಯಪುರ:
ವಕ್ಫ್ ಮಂಡಳಿ ಲ್ಯಾಂಡ್ ಜಿಹಾದ್ ಮಾಡುತ್ತಿದೆ. ಇದೊಂದು ಲ್ಯಾಂಡ್ ಟೆರರಿಸಂ. ವಕ್ಫ್ ಭಯೋತ್ಪಾದನೆ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ವಕ್ಫ್ ವಿರುದ್ಧ ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1974 ವಕ್ಫ್ ನೋಟಿಪಿಕೇಶನ್ ರದ್ದಾಗಬೇಕು. ಇದಕ್ಕೆ ಬಿಜೆಪಿ ಸುಮ್ಮನಿರಲ್ಲ, ಹೋರಾಟ ಮಾಡುತ್ತೆವೆ. ರಾಜ್ಯದಲ್ಲಿ ಎಲ್ಲಿ ನೋಡಿದರೂ ವಕ್ಫ್ ವಕ್ಫ್ ಆಗಿ ಬಿಟ್ಟಿದೆ. ಹಿಂದೂ ದೇವಾಲಯಗಳು, ಮಠ ಮಾನ್ಯಗಳು, ರೈತರ ಜಮೀನು ಒಂದು ಉಳಿದಿಲ್ಲ. ಇದರ ವಿರುದ್ಧ ವಿಜಯಪುರದಿಂದಲೇ ನಾನು ವಕ್ಫ್ ಹೋರಾಟ ಪ್ರಾರಂಭಿಸುತ್ತಿದ್ಧೆನೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಅವಧಿ ಅಹರೋತ್ರಿ ಧರಣಿಯಲ್ಲಿ ಭಾಗಿ ಆಗುತ್ತೆನೆ.
ಉಡುಪಿಯಲ್ಲಿ ಸುಲ್ತಾನಪುರ ಅಂತಾ ಒಂದು ಹಳ್ಳಿಯನ್ನೆ ನಿರ್ಮಾಣ ಮಾಡಿದ್ದಾರೆ. ಇದು ಖಂಡನೀಯ ಎಂದರು.
ದಿಶಾಂಕ ಆ್ಯಪ್ ನಲ್ಲಿ ಹಿಂದೂ ಹಳ್ಳಿ ಸುಲ್ತಾನಪುರ ಎಂದು ಶೋ ಆಗುತ್ತಿದೆ. ವಕ್ಫ್ ಹಾಗೂ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಶೋಭಾ ವಾಗ್ದಾಳಿ ನಡೆಸುತ್ತ, ಸಿದ್ದರಾಮಯ್ಯ ಸರ್ಕಾರ ಏನ್ ಮಾಡ್ಲಿಕ್ಕೆ ಹೊರಟಿದೆ ಎಂದು ಕಿಡಿಕಾರಿದರು.