ಡಿವೈಡರ್ ಬಳಿ ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ: ಸ್ಥಳದಲ್ಲೇ ವೃದ್ಧೆ ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ವಿಭಜಕದ ಬಳಿ ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ನಗರದ ಬಸವೇಶ್ವರ ಆಸ್ಪತ್ರೆ ಬಳಿಯಿರುವ ಖರ್ಗೆ ಪೆಟ್ರೋಲ್ ಬಂಕ್‌ನ ಟ್ರಾಫಿಕ್ ಲೈಟ್ ಬಳಿ ಈ ಘಟನೆ ನಡೆದಿದ್ದು, ವೃದ್ಧೆ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾರೆ.

ಮಲ್ಲಮ್ಮ ಸಾಯಬಣ್ಣ (65) ಮೃತಪಟ್ಟ ವೃದ್ಧೆ. ರಸ್ತೆ ದಾಟುತ್ತಿದ್ದ ವೇಳೆ ಡಿವೈಡರ್ ಬಳಿ ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಅಡಿಯಲ್ಲಿ ವೃದ್ಧೆಯ ಎಡತೊಡೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಿಂದ ಈ ವೃದ್ಧೆ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!