ಎಡಕುಮೇರಿಯಲ್ಲಿ ಮಣ್ಣು ಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ

ಹೊಸದಿಗಂತ ವರದಿ,ಮಂಗಳೂರು:

ಹಾಸನ, ಸಕಲೇಶಪುರ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾಗೂ ಎಡಕುಮೇರಿ ಭಾಗದಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಎಡಕುಮೇರಿ ಸಮೀಪದ ಕಡಗರವಳ್ಳಿ ಎಂಬಲ್ಲಿ ರೈಲು ಹಳಿಯ ಕೆಳ ಭಾಗದಲ್ಲಿ ಮಣ್ಣು ಕುಸಿದು ಬಿದ್ದಿದೆ.ಇದರಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ.

ಸುಬ್ರಹ್ಮಣ್ಯ ರೋಡು ರೈಲು ನಿಲ್ದಾಣದಿಂದ ಮುಂದೆ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಶುಕ್ರವಾರ ಘಟನೆ ನಡೆದಿದೆ.ಘಟನೆ ಬೆಳಕಿಗೆ ಬಂದ ತಕ್ಷಣ ರೈಲ್ವೆ ಇಲಾಖೆಯು ತಕ್ಷಣ ಈ ಭಾಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಿತು. ಹೀಗಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

ರೈಲ್ವೆ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಸಂಚಾರ ಸ್ಥಗಿತಗೊಂಡ ಕಾರಣ ಬೆಂಗಳೂರು-ಮಂಗಳೂರು, ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ತಡೆಯಾಯಿತು.

ಬೆಂಗಳೂರು- ಕಾರವಾರ ಪಂಚಗಂಗ ಎಕ್ಸ್‌ಪ್ರೆಸ್‌(16595), ಕಾರವಾರ-ಬೆಂಗಳೂರು ಪಂಚಗಂಗ ಎಕ್ಸ್‌ಪ್ರೆಸ್‌ (16596), ಮುರುಡೇಶ್ವರ-ಎಸ್.ಎಂ.ವಿ.ಟಿ ಬೆಂಗಳೂರು (16586),ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್‌ (16512) ರೈಲುಗಳು ಪಥ ಬದಲಿಸಿ ಚಲಿಸಲಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!