ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿರುವ ಲಾಪತಾ ಲೇಡೀಸ್ ಸಿನಿಮಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಸಿನಿಮಾದಲ್ಲಿ ನಟಿ ನಿಶಾಂತಿ ಫೂಲ್ ಕುಮಾರಿ ಪಾತ್ರದಲ್ಲಿ ನಟಿಸಿ ಎಲ್ಲರ ಮನ ಗೆದ್ದಿದ್ದಾರೆ. ಆಮಿರ್ ಖಾನ್ ಪ್ರೊಡಕ್ಷನ್ಸ್ನಲ್ಲಿ ಮೂಡಿ ಬಂದಿರುವ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ನಡೆದ ಮೆಟ್ ಗಾಲಾದಲ್ಲಿ ನಟಿ ಆಲಿಯಾ ಭಟ್ ಕೂಡ ಸಾಕಷ್ಟು ಮಿಂಚಿದ್ದರು, ಇದೇ ಜಾಗದಲ್ಲಿ ನಿಶಾಂತಿ ಗೋಯಲ್ ಇರುವ ಫೋಟೊಗಳು ವೈರಲ್ ಆಗಿವೆ.
ಆದರೆ ನಿಜವಾಗಿಯೂ ನಿಶಾಂತಿ ಮೆಟ್ ಗಾಲದಲ್ಲಿ ಭಾಗಿಯಾಗಿಲ್ಲ. ಆಮಿರ್ ಖಾನ್ ಪ್ರೊಡಕ್ಷನ್ಸ್ ಮಾಡಿದ ಪೋಸ್ಟ್ ಇದಾಗಿದೆ. ಭಾರತದಿಂದ ಮೆಟ್ಗಾಲಾಗೆ ತೆರಳಿದ ಏಕೈಕ ನಟಿ ಆಲಿಯಾ ಭಟ್ ಆಗಿದ್ದಾರೆ.
View this post on Instagram