ಗದ್ದಿಗೌಡರ ಎರಡು ಲಕ್ಷ ಮತಗಳ ಅಂತರದಿಂದ ಗೆಲವು ನಿಶ್ಚಿತ: ಚರಂತಿಮಠ

ದಿಗಂತ ವರದಿ ಬಾಗಲಕೋಟೆ:

ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ಸಾರಿ ಚುನಾವಣೆಯಲ್ಲಿ ಜಾತಿ ಸಮೀಕರಣ ಮಾಡಿದರು ಸಹ ನಮ್ಮ ಜಿಲ್ಲೆಯಲ್ಲಿ ವರ್ಕೌಟ ಆಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ಯಾರಂಟಿ ವೇಗದಲ್ಲಿ ಕಾಂಗ್ರೆಸ್ ಗ್ಯಾರಂಟಿ ಆಟ ನಡೆಯಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಜನ ನಂಬಿ ಮತ ಹಾಕಿದ್ದರು.

ಕ್ಷೇತ್ರದಲ್ಲಿ ಉಳಿ ಬಿಸಿಲಿನಲ್ಲಿಯೂ ಮತದಾರರು ವಯೋ ವೃದ್ಧರು, ಅಂಗವಿಕಲರು, ಯುವಕರು, ಯುವತಿಯರು ತಮ್ಮ ಮತದಾನದ ಹಕ್ಕನ್ನು ಮತಗಟ್ಟೆಗೆ ಬಂದು ಚಲಾಯಿಸಿದ್ದಾರೆ. ಇದು ಖುಷಿ ನೀಡಿತು.
ರಾಜ್ಯದಲ್ಲಿ ಬೀಕರ ಬರಗಾಲ ಬಿದ್ದರು ಆಡಳಿತ ಯಂತ್ರ ಸಂಪೂರ್ಣ ನಿಷ್ಕೃಯವಾಗಿದೆ. ಜಿಲ್ಲೆಯಲ್ಲಿ ಖಾಸಗಿ ಟ್ಯಾಂಕರ ಮೂಲಕ ಜನರ ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್‌ನಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರವು ಗ್ಯಾರಂಟಿ ಬಿತ್ತರಿಸುತ್ತಾ ಬರಗಾಲ ಕಾಮಗಾರಿ ಮರೆತಿದ್ದಾರೆ. ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ರೇಸಾರ್ಟ ಪ್ರವಾಸ ಆರಂಭಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಸ್ವಚ್ಛತೆ ಆದ್ಯತೆ ನೀಡುತ್ತಿಲ್ಲ. ಬಿಟಿಡಿಎ ಕಾರ್ಪಸ್ ಫಂಡ್ ೩೮೪ ಕೋಟಿ ರೂ. ವಾಪಸ್ ಬರಲಿಲ್ಲ. ಹೊಸ ಕಾಮಗಾರಿಗಳು ಆರಂಭವಾಗಿಲ್ಲ. ಮೋದಿ ಟೀಕೆ ಮಾಡುವದರಲ್ಲಿ ಕಾಂಗ್ರೆಸ್ ಕಾಲ ಕಳೆದಿದೆ ಎಂದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!