ವಾಹನಗಳ ಬಿಡಿ ಭಾಗದಿಂದ ತಯಾರಾಗಿದೆ ಅತಿ ದೊಡ್ಡ ವೀಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಕಲಾವಿದರ ಗುಂಪೊಂದು ವಾಹನಗಳ ಬಿಡಿ ಭಾಗ ಬಳಸಿ ದೊಡ್ಡ ವೀಣೆಯನ್ನು ತಯಾರಿಸಿದ್ದಾರೆ.

ಹೊಸ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಾವಿದರು ಈ ಬೃಹತ್ ವೀಣೆ ತಯಾರಿಸಿದ್ದಾರೆ. 28 ಅಡಿ ಉದ್ದ, 10 ಅಡಿ ಅಗಲ, 12 ಅಡಿ ಉದ್ದದ ಈ ವೀಣೆ ನೋಡಿ ಮನಸೋಲದವರಿಲ್ಲ. 10 ಲಕ್ಷ ರೂಪಾಯಿ ವೆಚ್ಚದಲ್ಲಿ ವೀಣೆ ತಯಾರಾಗಿದೆ. ವಾಹನಗಳ ಎಲ್ಲ ಬಿಡಿಭಾಗಗಳನ್ನು ಇಲ್ಲಿ ಬಳಸಲಾಗಿದೆ. ವಿಶ್ವದ ಅತಿ ದೊಡ್ಡ ರುದ್ರ ವೀಣೆ ಇದಾಗಿದೆ.

 

ಗೇರ್, ಬಾಲ್ ಬೇರಿಂಗ್ ಹಾಗೂ ಚೈನ್‌ನ್ನು ಬಳಸಿ ವೀಣೆಯನ್ನು ತಯಾರಿಸಲಾಗಿದೆ. ದೇಶಾದ್ಯಂತ ಒಟ್ಟಾರೆ 15 ಕಲಾವಿದರು ವೀಣೆ ತಯಾರಿಕೆಯಲ್ಲಿ ನಿರತರಾಗಿದ್ದರು. ಜನರು ಇದರ ಜೊತೆ ಸೆಲ್ಫಿ ತೆಗೆದುಕೊಳ್ಳಲಿ, ಹತ್ತಿರದಿಂದ ನೋಡಲಿ ಇದಕ್ಕೆ ಲೈಟ್ ಹಾಗೂ ಮ್ಯೂಸಿಕ್ ಸಿಸ್ಟಮ್ ಹಾಕುತ್ತೇವೆ ಎಂದು ಕಲಾವಿದರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!