June 11, 2026
Thursday, June 11, 2026
spot_img

ಪಾಕ್ ಉಗ್ರರಿಗೆ ಶುರುವಾಗಿದೆ ನಡುಕ: ಅಪರಿಚಿತರ ಗುಂಡಿಗೆ ಲಷ್ಕರ್ ಕಮಾಂಡರ್ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದೊಳಗೆ ಅಡಗಿರುವ ಉಗ್ರ ಸಂಘಟನೆಗಳ ನಾಯಕರ ಮೇಲೆ ನಿಗೂಢ ದಾಳಿಗಳು ಮುಂದುವರಿದಿವೆ. ಈ ಸರಣಿಯಲ್ಲಿ ಇದೀಗ ಲಷ್ಕರ್-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ವರದಿಗಳ ಪ್ರಕಾರ, ಅಫ್ರಿದಿ ಮೇಲೆ ಸಮೀಪದಿಂದಲೇ ಹಲವು ಸುತ್ತು ಗುಂಡು ಹಾರಿಸಲಾಗಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ತನಿಖಾ ಮೂಲಗಳ ಪ್ರಕಾರ ಇದು ಪೂರ್ವಯೋಜಿತ ಟಾರ್ಗೆಟೆಡ್ ದಾಳಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ:

ದಾಳಿಕೋರರು ಅತ್ಯಂತ ನಿಖರವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಲಷ್ಕರ್ ಮತ್ತು ಜೈಶ್ ಸಂಘಟನೆಗಳಿಗೆ ಸಂಬಂಧಿಸಿದ ಹಲವು ಪ್ರಮುಖರು ಇದೇ ರೀತಿ ಹತ್ಯೆಯಾಗಿದ್ದಾರೆ. ಲಾಹೋರ್, ಕರಾಚಿ ಸೇರಿದಂತೆ ಹಲವು ನಗರಗಳಲ್ಲಿ ನಡೆದ ಈ ದಾಳಿಗಳು ಉಗ್ರ ಸಂಘಟನೆಗಳಲ್ಲಿ ಆತಂಕ ಮೂಡಿಸಿವೆ.

ಈ ನಿಗೂಢ ಹತ್ಯೆಗಳ ಹಿಂದಿರುವ ಶಕ್ತಿಗಳು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !