ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಈ ವರ್ಷದ ಕಡೆಯ ಚಂದ್ರಗ್ರಹಣ ಗೋಚರವಾಗಲಿದ್ದು, ದೇಶದ ಪ್ರಮುಖ ದೇಗುಲಗಳು ಬಂದ್ ಆಗಲಿವೆ.
ತಿರುಪತಿ ತಿಮ್ಮಪ್ಪದ ದರುಶನಕ್ಕೆ ತೆರಳುವವರು ರಾತ್ರಿ 7 ಗಂಟೆಯ ಒಳಗೇ ತೆರಳಿ, ರಾತ್ರಿ 7 ರಿಂದ ಬೆಳಗಿನ ಜಾವ 3:15 ರವರೆಗೆ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ.
ಇನ್ನು ಕರ್ನಾಟಕದ ಪ್ರಮುಖ ದೇಗುಲಗಳೂ ಗ್ರಹಣ ಸಮಯದಲ್ಲಿ ತೆರೆದಿರುವುದಿಲ್ಲ. ಉಡುಪಿಯ ಶ್ರೀಕೃಷ್ಣ ಮಠ ಸಂಜೆ 4 ಗಂಟೆ ನಂತರ ಬಂದ್ ಆಗಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಾಗಿಲು ಸಂಜೆ 6:30ಕ್ಕೆ ಮುಚ್ಚಲಾಗುತ್ತದೆ.
ಇನ್ನು ಗೋಕರ್ಣದಲ್ಲಿ ಗ್ರಹಣದ ಸಮಯದಲ್ಲಿಯೇ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ನೀಡಲಾಗಿದೆ. ಸವದತ್ತಿಯ ಯಲ್ಲಮ್ಮ ದೇಗುಲದಲ್ಲಿ ಎಂದಿನಂತೆ ದೇವಿ ದರುಶನಕ್ಕೆ ಅವಕಾಶ ನೀಡಲಾಗಿದೆ.
ಸಂಜೆ 6 ಗಂಟೆ ನಂತರ ಚಾಮುಂಡಿ ಬೆಟ್ಟ ಬಂದ್ ಆಗಲಿದ್ದು, ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಸಂಜೆ 5 ಗಂಟೆಗೆ ತೆಪ್ಪೋತ್ಸವ ನೆರವೇರಿಸಿ ನಂತರ ಭಕ್ತರಿಗೆ ಪ್ರವೇಶ ನಿಷೇಧಿಸಲಾಗುತ್ತದೆ.
ರಾಜಧಾನಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲವನ್ನು ಬೆಳಗ್ಗೆ 11 ಗಂಟೆ ನಂತರ ಬಂದ್ ಮಾಡಲಾಗುತ್ತದೆ.