ಲೋಕೋಪೈಲಟ್‌ ಸಮಯ ಸ್ಪೂರ್ತಿಯಿಂದ ಬದುಕುಳಿದ ಸಲಗ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವನ್ಯಜೀವಿಗಳು ಹಳಿ ದಾಟಿ ರೈಲಿನಡಿ ಸಿಲುಕಿ ಸಾವನ್ನಪ್ಪಿದ ನಿದರ್ಶನಗಳು ಸಾಕಷ್ಟಿವೆ. ಪ್ರಾಣಿಗಳು ಅಡ್ಡ ಬಂದಾಗ ರೈಲಿನ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದ ಲೋಕೋ ಪೈಲಟ್ ಅಸಹಾಯಕ ಸ್ಥಿತಿಯಲ್ಲಿ ರೈಲನ್ನು ಪ್ರಾಣಿಗಳ ಮೇಲೆ ಹತ್ತಿಸಿದ್ದಾರೆ. ಒಂದು ಸರ್ವೆ ಪ್ರಕಾರ ಭಾರತದಲ್ಲಿ ವನ್ಯಜೀವಿಗಳು ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಸಾಯುವುದಕ್ಕಿಂತ ಹೆಚ್ಚಾಗಿ ರೈಲು ಅಪಘಾತಗಳಿಂದ ಸಾಯುತ್ತವೆ. ಅದನ್ನು ತಪ್ಪಿಸಲು ಆನೆ ಹಳಿ ದಾಟಲು ಯತ್ನಿಸುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದಾರೆ. ಉತ್ತರ ಬಂಗಾಳ ರೈಲ್ವೆ ವಿಭಾಗದ ಅಡಿಯಲ್ಲಿ ಗುಲ್ಮಾ ಮತ್ತು ಸಿವೋಕ್ ನಡುವೆ ಈ ಘಟನೆ ನಡೆದಿದೆ. ಗುಲ್ಮಾ – ಸಿವೋಕ್ ನಡುವಿನ ಕೆಎಂ 23/1 ಪ್ರದೇಶದಲ್ಲಿ ಆನೆಯೊಂದು ರೈಲ್ವೆ ಹಳಿ ದಾಟಲು ಪ್ರಯತ್ನಿಸುತ್ತಿರುವಾಗ ಲೋಕೋ ಪೈಲಟ್‌ ರೈಲನ್ನು ನಿಧಾನವಾಗಿ ನಡೆಸಿ ಆನೆಯ ಪ್ರಾಣ ಕಾಪಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಲೋಕೋ ಪೈಲಟ್‌ ಸಮಯ ಸ್ಪೂರ್ತಿಗೆ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!