ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದು ತಲುಪಿದೆ.
ಇದುವರೆಗೂ 52 ಮೀಟರ್ ಡ್ರಿಲ್ಲಿಂಗ್ ಕಾರ್ಯ ಮುಗಿದಿದ್ದು, ಇನ್ನೇನು ಮೂರು ಮೀಟರ್ ಡ್ರಿಲ್ಲಿಂಗ್ ನಡೆದರೆ ಕಾರ್ಮಿಕರನ್ನು ಹೊರತರಬಹುದಾಗಿದೆ.
ಇಂದು ಸಂಜೆವೇಳೆಗೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗುತ್ತದೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸಿಎಂ ಪುಷ್ಕರ್ ಸಿಂಗ್ ಭೇಟಿ ನೀಡಿದ್ದು, ಎಲ್ಲ ರೀತಿಯ ಸಹಾಯ ಮಾಡುತ್ತಿದ್ದೇವೆ, ಇಂದು ಸಂಜೆ ಇಲ್ಲವೇ ನಾಳೆ ಬೆಳಗ್ಗೆ ವೇಳೆಗೆ ಕಾರ್ಮಿಕರು ಸುರಂಗದಿಂದ ಹೊರಬರಲಿದ್ದಾರೆ.
ಕಾರ್ಮಿಕರಿಗೆ ಆಹಾರ, ಡ್ರೈಫ್ರೂಟ್ಸ್ ನೀಡುತ್ತಿದ್ದೇವೆ ಜೊತೆಗೆ ಮಾನಸಿಕವಾಗಿ ಕುಗ್ಗದಿರಲಿ ಎನ್ನುವ ಕಾರಣಕ್ಕೆ ಆಟಿಕೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ರಂಧ್ರ ಗಣಿಗಾರಿಕೆ ತಜ್ಞರ ತಂಡ ಕಾರ್ಮಿಕರನ್ನು ತಲುಪಲು ಕೇವಲ ಮೂರು ಮೀಟರ್ ಬಾಕಿ ಇದೆ.
ಸುರಂಗದ ಹೊರಗೆ ಆಂಬ್ಯುಲೆನ್ಸ್, ವೈದ್ಯರು ಕಾದಿದ್ದಾರೆ. ಇನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಬೆಡ್ ಕಾದಿರಿಸಲಾಗಿದೆ.