ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಸಂಗೀತ ಜೀವನ ಹೇಗಿತ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಕಂಡ ಶ್ರೇಷ್ಠ ಗಾಯಕರಲ್ಲಿ ಗಾನಕೋಗಿಲೆ ಎಂದೇ ಕರೆಯಲ್ಪಡುವವರಲ್ಲಿ ಲತಾ ಮಂಗೇಶ್ಕರ್‌ ಪ್ರಮುಖರು. ಇಂದು ಸಂಗೀತ ಜಗತ್ತಿನ ಹಿರಿಯ ಕೊಂಡಿ ಕಳಚಿದೆ.
ಲತಾ ಮಂಗೇಶ್ಕರ್‌ ಅವರು 1929ರ ಸೆ.28ರಂದು ಜನಿಸಿದರು. ಶಾಸ್ತ್ರೀಯ ಸಂಗೀತಗಾರ ಪಂಡಿತ್‌ ದೀನಾನಾಥ್‌ ಮಂಗೇಶ್ಕರ್‌ ಪುತ್ರಿಯಾಗಿ ಮಧ್ಯಪ್ರದೇಶದಲ್ಲಿ ಜನಸಿದರು.

Untold love story of veteran singer Lata Mangeshkar, reason why she is  still unmarried - OrissaPOST

ತಂದೆ ದೀನಾನಾಥ್‌ ರಿಂದ ಸಂಗೀತ ಪಾಠ ಕಲಿತ ಲತಾ ಮಂಗೇಶ್ಕರ್‌ ಗೆ ಯಾವುದೇ ಔಪಚಾರಿಕ ಸಂಗೀತ ಶಿಕ್ಷಣ ದೊರೆತಿಲ್ಲ.
ತಮ್ಮ 13ನೇ ವಯಸ್ಸಿಗೆ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದರು. ತಮ್ಮ ಇಡೀ ಜೀವನದಲ್ಲಿ 30ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

Lata Mangeshkar 92th Birthday Special: Know Interesting facts about the  legendary singer | 11 साल की उम्र से गाने लगी थीं लता मंगेशकर, बचपन में ही  सिर से उठा पिता का सायाಭಾರತದ 36 ವಿವಿಧ ಭಾಷೆಗಳಲ್ಲಿ ಲತಾ ಅವರು ಹಾಡಿದ್ದಾರೆ. ಇವರ ಸಂಗೀತ ಸಾಧನೆಗೆ 1969ರಲ್ಲಿ ಪದ್ಮಭೂಷಣ, 1999ರಲ್ಲಿ ಪದ್ಮವಿಭೂಷಣ, 1990ರಲ್ಲಿ ದಾದಾ ಸಾಹೇಬ್‌ ಪಾಲ್ಕೆ, 2001ರಲ್ಲಿ ಭಾರತ ರತ್ನ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ತಮ್ಮ ಮುಡಿಗೇರಿಸಿಕೊಂಡವರು.

Lata Mangeshkar / Lata Mangeshkar - Bollywood Photosಇನ್ನು ಚಿತ್ರ ಗೀತೆಗಳು ಮಾತ್ರವಲ್ಲದೆ ಗಜಲ್‌, ಪ್ರೇಮಗೀತೆ, ಜನಪದ ಗೀತೆ, ಯುಗಳಗೀತೆ, ಕ್ಲಬ್‌ ಸಾಂಗ್‌ ಸೇರಿ ಎಲ್ಲಾ ಬಗೆಯ ಹಾಡುಗಳನ್ನು ಹಾಡುತ್ತಾ, ಸಂಗೀತಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟರು.
1967ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು” ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ” ಹಾಡುಗಳನ್ನು ಹಾಡಿದ್ದಾರೆ.

Lata Mangeshkar roots for Narendra Modi as PM; she is entitled to her view,  says Congressಇನ್ನು ಪ್ರತಿ ರಾಷ್ಟ್ರೀಯ ಹಬ್ಬಗಳಂದು ಕೇಳುವ, ಪ್ರತಿಯೊಬ್ಬ ಭಾರತೀಯನ ಕಣ್ಣಂಚಿನಲ್ಲಿ ನೀರು ತರಿಸುವ ʼಹೇ ಮೇರೆ ವತನ್‌ ಕೀ ಲೋಗೋನ್‌, ಜರಾ ಆಂಖ್‌ ಮೆ ಭರಲೋ ಪಾನಿ..ʼ ಹಾಡನ್ನೂ ಕೂಡ ಲತಾ ಮಂಗೇಶ್ಕರ್‌ ಹಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!