ಅಂಡರ್-19‌ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶನಿವಾರ ಆಂಟಿಗುವಾದಲ್ಲಿ ನಡೆದ ಅಂಡರ್-19 ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವ ಭಾರತೀಯ ತಂಡಕ್ಕೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿದೆ.
ಟೀಂ ಇಂಡಿಯಾದ ಅಂಡರ್-19‌ ವಿಶ್ವ ಕಪ್‌ ಟ್ರೋಫಿ ಗಳಿಸುವ ಮೂಲಕ ಐದನೇ ಬಾರಿಗೆ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿದೆ.
ವಿಜೇತ ಭಾರತ ತಂಡಕ್ಕೆ ಲಕ್ಷಾಂತರ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಈ ಸಾಧನೆಗೆ ಬಿಸಿಸಿಐ ಕೂಡ ಬಹುಮಾನ ಘೋಷಣೆ ಮಾಡಿದೆ.
ಈ ಬಗ್ಗೆ ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ವಿಶ್ವ ಕಪ್‌ ಗೆದ್ದ ಅಂಡರ್-19‌ ತಂಡಕ್ಕೆ, ಸಹಾಯಕ ಸಿಬ್ಬಂದಿಗೆ, ಆಯ್ಕೆದಾರರಿಗೆ ಅಭಿನಂದನೆಗಳು. ಗೆಲುವಿನ ಸಂಕೇತವಾಗಿ 40 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 40 ಲಕ್ಷ ರೂ. ಹಾಗೂ ಸಹಾಯಕ ಸಿಬ್ಬಂದಿಗೆ ತಲಾ 25 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!