Saturday, August 13, 2022

Latest Posts

ಲತಾ ಮಂಗೇಶ್ಕರ್‌ ನಿಧನ: ಅರಮನೆಯ ದೀಪಾಲಂಕಾರ, ಧ್ವನಿ- ಬೆಳಕಿನ ಕಾರ್ಯಕ್ರಮ ರದ್ದು

ಹೊಸದಿಗಂತ ವರದಿ, ಮೈಸೂರು:

ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆಡಳಿತ ಮಂಡಳಿ ಫೆ.7ರ ದೀಪಾಲಂಕಾರ ಹಾಗೂ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ರದ್ದು ಮಾಡಿತ್ತು.
ಸರ್ಕಾರದ ಆದೇಶ ಮತ್ತು ಜಿಲ್ಲಾಧಿಕಾರಿಗಳ ಒಪ್ಪಿಗೆ ಮೇರೆಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೌರವಾರ್ಥ ಫೆ.6 ಅರಮನೆ ದೀಪಾಲಂಕಾರ ಮತ್ತು ಫೆ.7ರ ಸಂಜೆ 7ರಿಂದ 8ರ ವರೆಗೆ ನಿಗದಿಯಾಗಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರದ್ದು ಮಾಡಲಾಗಿದೆ.
ಉಳಿದಂತೆ ಬೆಳಿಗ್ಗೆ 10ಗಂಟೆಯಿoದ ಸಂಜೆ 5.30ರ ವರೆಗೆ ಸಾರ್ವಜನಿಕ ಪ್ರವೇಶಕ್ಕೆ ಕಲ್ಪಿಸಲಾಗಿರುವ ಅವಕಾಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss