Monday, August 8, 2022

Latest Posts

ಹಿಜಾಬ್ ಧರಿಸಿ ಪಾಠ ಕಲಿಯುದಾದರೇ ತಾಲಿಬಾನ್ ಗೆ ಹೋಗಿ: ಅಂದೋಲಾ ಶ್ರೀ

ಹೊಸದಿಗಂತ ವರದಿ, ಕಲಬುರಗಿ:

ಶಾಲೆಯ ವಸ್ತ್ರ ಸಂಹಿತೆ ಪಾಲಿಸದಿದ್ದರೆ, ಅವರನ್ನು ಶಾಲೆಯಿಂದ ವಜಾ ಮಾಡಬೇಕು ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಹಾಗೂ ಅಂದೋಲಾ,ದ ಕರುಣೇಶ್ವರ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಿಡಿಕಾರಿದ್ದಾರೆ.

ಸೋಮವಾರ ಅವರು ಶ್ರೀ ರಾಮ ಸೇನೆ ಜಿಲ್ಲಾ ವಿಧ್ಯಾಥಿ೯ ಘಟಕದ ವತಿಯಿಂದ ಹಿಜಾಬ್ ,ನ್ನು ವಿರೋಧಿಸಿ, ನಗರದ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಿ, ಪ್ರತಿಭಟನೆ ನಡೆಸಿ ಮಾತನಾಡಿದರು.

ಸಕಾ೯ರಿ ಮತ್ತು ಖಾಸಗಿ ಶಾಲೆಯಲ್ಲಿ ಹಿಜಾಬ್, ನ್ನು ನಿಷೇಧಿಸಬೇಕು. ಶಾಲೆಗಳು ಮತ್ತು ವಿದ್ಯಾಕೇಂದ್ರಗಳಲಿ ಹಿಜಾಬ್ ಧರಿಸಿ ಪಾಠ ಕಲಿಯಬೇಕೆನ್ನುವವರು ತಾಲಿಬಾನ್ ಅಥವಾ ಪಾಕಿಸ್ತಾನ ಕ್ಕೆ ಹೋಗಲಿ ಎಂದು ಆಗ್ರಹಿಸಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಕಾರ, ಭಾರತ ದೇಶವು ಭಾವೈಕ್ಯತೆ,ಸಮಾನತೆಯಿಂದ ತುಂಬಿದ ದೇಶವಾಗಿದೆ. ಹೀಗಿರುವಾಗ ಶಾಲೆಗಳಲ್ಲಿ ಎಕವಸ್ತ್ರ ರೂಪಿಸಿದರು, ಇತ್ತೀಚೆಗೆ ಮುಸ್ಲಿಂ ಸಮುದಾಯದವರು ತಮ್ಮ ಧಮ೯ವನ್ನು ಎತ್ತಿ ತೋರಿಸುತ್ತಿರುವುದು ಖಂಡನೀಯ ವಿಷಯವೆಂದರು.

ರಾಜ್ಯ ಸರ್ಕಾರ ಎಕ ಸಮವಸ್ತ್ರ ಜಾರಿಗೆ ತರಬೇಕು. ಯಾವ ವಿಧ್ಯಾಥಿ೯ಗಳು ಇವುಗಳನ್ನು ಒಪ್ಪುವುದಿಲ್ಲ ಅಂಥವರನ್ನು ಹೊರಹಾಕಬೇಕೆಂದರು. ಎಲ್ಲಿಯವರೆಗೆ ಹಿಜಾಬ್ (ಬುಖಾ೯) ಧರಿಸುವುದನ್ನು ಬಿಡುವುದಿಲ್ಲ, ಅಲ್ಲಿಯವರೆಗೆ ನಾವು ಸಹ ವಿದ್ಯಾಮಂದಿರಗಳಲ್ಲಿ ಹಿಂದೂ ಸಂಪ್ರದಾಯದಂತೆ ಕೇಸರಿ ಶಾಲು,ಪಂಚೆ ಹಾಕಿಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇನ್ನೂ ಉತ್ತರ ಮತಕ್ಷೇತ್ರದ ಶಾಸಕಿ ಖನಿಜ ಫಾತೀಮಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೋಮು ಗಲಭೆ ಕೆರಳಿಸುವಂತಹ ಶಾಸಕರ ಇನ್ನೊಂದು ಮುಖ ಅನಾವರಣವಾಗಿದೆ. ಹಿಜಾಬ್ ಧರಿಸಿಯೇ, ವಿಧಾನ ಸೌಧಕ್ಕೆ ಹೋಗುತ್ತೇನೆ ಧೈರ್ಯ ಇದ್ದರೆ ತಡೆಯಿರಿ ಎಂಬ ಮಾತಿಗೆ ಕಿಡಿಕಾರಿದ ಅವರು, ಇಷ್ಟು ದಿವಸ ಫಾತೀಮಾ ಅವರು ಬಟ್ಟೆ ಧರಿಸಿ ಹೋಗಿದ್ರಾ ಅಥವಾ ವಸ್ತ್ರರಹಿತವಾಗಿ ಹೋಗಿದ್ದಾ ? ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಹೇಶ್ ಗೊಬ್ಬುರ,ಮಹೇಶ್ ಕೆಂಭಾವಿ, ಅಖಿಲೇಶ್ ಓಡೆಯರ್, ಮಹಾದೇವ ಮ್ಯಾಡಿ, ಶಿವಾನಂದ ಅಷ್ಟಗಿ, ಶಿವಕುಮಾರ್ ಹಾಗರಗಿ, ಸಂತೋಷ ಹಿರೇಮಠ, ಅರುಣಕುಮಾರ್ ಸುಲ್ತಾನಪುರ ಸೇರಿದಂತೆ ವಿವಿಧ ವಿಧ್ಯಾಥಿ೯ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss