ಮುಗುಳ್ನಕ್ಕ ಮಂದಸ್ಮಿತ ಬಾಲರಾಮ: ಎಐ ಸೃಷ್ಟಿಸಿದ ವೀಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ರಾಮಲಲಾನ ಮೂರ್ತಿಯೂ ಮುಗುಳ್ನಗುತ್ತಾ ತನ್ನ ತಲೆಯನ್ನು ಅತ್ತಿತ್ತ ತಿರುಗಿಸುತ್ತಾ ನೋಡುತ್ತಿರುವಂತೆ ಭಾಸವಾಗುವ ವೀಡಿಯೋವೊಂದನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಂತೂ ಎಲ್ಲಿ ನೋಡಿದರೂ ಬಾಲ ರಾಮನ ವಿಗ್ರಹದ ಸುಂದರ ಪೋಟೋಗಳೇ ಹರಿದಾಡುತ್ತಿವೆ. ಈ ನಡುವೆ ಕಲಾವಿದರೊಬ್ಬರು ಎ.ಐ ತಂತ್ರಜ್ಞಾನವನ್ನು ಬಳಸಿ ತಯಾರಿಸಿದಂತಹ ಬಾಲ ರಾಮನ ಮೂರ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಲಾವಿದನ ಕಲ್ಪನೆಯಲ್ಲಿ ಮೂಡಿದ ನಗು ಮೊಗದ ಬಾಲ ರಾಮನನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.

ಮುದ್ದು ಬಾಲರಾಮನ ಚಿತ್ರವನ್ನು ಬಳಸಿಕೊಂಡು ಈ ವೀಡಿಯೋ ಮಾಡಲಾಗಿತ್ತು. ನಿಜವಾಗಿಯೂ ಬಾಲರಾಮನೇ ತಲೆ ಅಲ್ಲಾಡಿಸುತ್ತಾ ಅತ್ತಿತ್ತ ನೋಡುವಂತಿದೆ ಈ ವೀಡಿಯೋ. ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಚೌಧರಿ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ನೋಡಿ ಮೈ ರೋಮಾಂಚನವಾಯ್ತ, ಇದನ್ನು ನಿರ್ಮಿಸಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ವೀಡಿಯೋ ನೋಡಿದ ಬಹುತೇಕರು ಇದಕ್ಕೆ ಅದ್ಭುತ, ಸುಂದರ ಅತೀ ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!