ಕೇಂದ್ರ ,ರಾಜ್ಯದ ಸರ್ಕಾರದ ಯೋಜನೆಗಳ ‘ವಸುದೈವ ಕುಟುಂಬಕಂ’ ಪುಸ್ತಕ ಲೋಕಾರ್ಪಣೆ

ಹೊಸದಿಗಂತ ವರದಿ, ಬೀದರ್

ಕೇಂದ್ರ ಹಾಗು ರಾಜ್ಯದ ಸರ್ಕಾರದ ಯೋಜನೆಗಳ ಮಾಹಿತಿ ಪುಸ್ತಕ “ವಸುದೈವ ಕುಟುಂಬಕಂ” ಪುಸ್ತಕ ರಾಜ್ಯಪಾಲರಾದ ಥಾವರ ಚಂದ ಗೆಹ್ಲೋಟ್ ರಾಜ್ಯ ಭವನದಲ್ಲಿ ಲೋಕಾರ್ಪಣೆಗೊಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾರ್ಗದರ್ಶನದಲ್ಲಿ, ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ, ಜಿ ಟಿ ಸುರೇಶ ಕುಮಾರ ರವರ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯ ಸೂರ್ಯಕಾಂತ ನಾಗರಾಮಪಳ್ಳಿ ಅಧ್ಯಕ್ಷರು ಡಾ. ಗುರುಪಾದಪ್ಪ ನಾಗರಾಮಪಳ್ಳಿ ಪ್ರತಿಷ್ಠಾನದಿಂದ ಪ್ರಕಾಶಿಸಲಾದ ಈ ಪುಸ್ತಕವು ರಾಜ್ಯದ ಜನರಿಗೆ ಬಹಳ ಉಪಯೋಗವಾಗಲಿದೆ ಎಂದು ನುಡಿದರು.
ಡಾ ಗುರುಪಾದಪ್ಪ ನಗರಂಪಳ್ಳಿ ಪ್ರತಿಷ್ಠಾನದ ವತಿಯಿಂದ ಬೀದರ ಜಿಲ್ಲೆಯ ಹಾಗೂ ರಾಜ್ಯದ ಸವಾರ್ಂಗೀಣ ಅಭಿವೃದ್ಧಿಗಾಗಿ ನೂರಾರು ಯೋಜನೆಗಳು ಅನುಷ್ಠಾನ ಗೋಳಿಸಲಾಗುತ್ತಿದೆ.
ಕೇಂದ್ರ ಹೇಗು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯ “ವಾಸುದೈವ ಕುಟುಂಬಕಂ” ಪುಸ್ತಕದ ಮೂಲಕ ಬೀದರ ಉತ್ತರ ವಿಧಾನ ಸಭಾ ಕ್ಷೇತ್ರಾದ್ಯಂತ ಜಾಗೃತಿ ಮೂಡಿಸಿಲಾಗಿದೆ.ಭಾರತ ಸರ್ಕಾರದ 170ಕ್ಕೂ ಹೆಚ್ಚು ಯೋಜನೆಗಳಲ್ಲಿ ಪ್ರಮುಖವಾಗಿ ಪ್ರಧಾನಮಂತ್ರಿ ಜನಧನ ಯೋಜನೆ, ಅಯುಷ್ಮಾನ್ ಭಾರತ್, ಜನ್ ಔಷಧಿ, ಸ್ಟಾರ್ಟಪ್ ಇಂಡೀಯಾ, ಸ್ಟ್ಯಾಂಡಪ್ ಇಂಡಿಯಾ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರಾಷ್ಟ್ರೀಯ ಅರೋಗ್ಯ ನಿಧಿ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ, ಪ್ರಧಾನಮಂತ್ರಿ ಶ್ರಮ-ಯೋಗಿ ಮಾನ್-ಧನ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಜಲ ಜೀವನ ಅಭಿಯಾನ, ಪ್ರಧಾನಮಂತ್ರಿ ವಯ ವಂದನ ಯೋಜನೆ ಇಂತಹ ಇನ್ನೂ ಹಲವಾರು ಯೋಜನೆಗಳ ಕುರಿತು ಮಾಹಿತಿ ಹಾಗೂ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಸಲಾಗಿದೆ.
ವಸುದೈವ ಕುುಂಬಕಂ ಪುಸ್ತಕದ ಲೋಕಾರ್ಪಣೆ ಸಮರಭದಲ್ಲಿ ಡಾ. ಗುರುಪಾದಪ್ಪಾ ನಾಗರಾಮಪಳ್ಳಿ ಪ್ರತಿಷ್ಠಾನದ ಅಧ್ಯಕ್ಷರಾದ ಸೂರ್ಯಕಾಂತ ನಾಗರಾಮಪಳ್ಳಿ, ರಾಜ್ಯ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ, ಜಿ ಟಿ ಸುರೇಶ ಕುಮಾರ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!