ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಿಂದೆ ನಾಯಕ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇಬ್ಬರೂ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ವೈರಲ್ ಆಗಿದ್ದರೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದೀಗ ಮತ್ತೊಮ್ಮೆ ಈ ಜೋಡಿ ವೈರಲ್ ಆಗಿದೆ. ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಈ ಹಿಂದೆ ಮಿಸ್ಟರ್ ಮತ್ತು ಅಂತರಿಕ್ಷಂ ಎಂಬ ಎರಡು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದಾರೆ.
ಇವರಿಬ್ಬರೂ ಅಂತರಿಕ್ಷಂ ಚಿತ್ರದ ಕಾಲದಿಂದಲೂ ಆತ್ಮೀಯರಾಗಿದ್ದರು, ಆ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವರದಿಗಳು ಬಂದಿದ್ದವು. ವರುಣ್ ಸಹೋದರಿ ನಿಹಾರಿಕಾ ಮದುವೆಗೂ ಕೂಡ ಲಾವಣ್ಯ ಬಂದಿದ್ದರು. ಅಷ್ಟೆ ಅಲ್ಲ ಲಾವಣ್ಯ ತ್ರಿಪಾಠಿ ಮೆಗಾ ಕುಟುಂಬದ ವಿವಿಧ ಕಾರ್ಯಕ್ರಮಗಳು, ನಿಹಾರಿಕಾ ಮತ್ತು ವರುಣ್ ಅವರ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಾರೆ.
ಲಾವಣ್ಯ ಮತ್ತು ವರುಣ್ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು ಲೇಟೆಸ್ಟ್ ಟಾಕ್. ಜೂನ್ ಮೊದಲ ವಾರದಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ ಇದು ಎಷ್ಟು ಸತ್ಯ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಇಬ್ಬರೂ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಾವಣ್ಯ ತ್ರಿಪಾಠಿ ತಮಿಳು ಸಿನಿಮಾವೊಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತು ಈ ಸುದ್ದಿ ಎಷ್ಟು ಸತ್ಯ ಎಂಬುದು ಅವರಿಗೇ ತಿಳಿಯಬೇಕು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ವರುಣ್ ಮತ್ತು ಲಾವಣ್ಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.