ನಟ ದರ್ಶನ್ ನನ್ನು ಭೇಟಿಯಾದ ವಕೀಲರು: ಯಾವ ವಿಚಾರದ ಕುರಿತು ನಡೆಯಿತು ಚರ್ಚೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ ನನ್ನು ಇಂದು ವಕೀಲರು ಭೇಟಿಯಾಗಿ ಚರ್ಚಿಸಿದ್ದಾರೆ .

ನಟ ದರ್ಶನ್​ ಭೇಟಿ ಬಳಿಕ ಮಾತನಾಡಿದ ವಕೀಲ ಸುನೀಲ್​, ಹೊಸ ಮ್ಯಾನುವಲ್‌ ಪ್ರಕಾರ ಸೌಲಭ್ಯ ನೀಡಲು ಜೈಲಾಧಿಕಾರಿಗೆ ಮನವಿ ಮಾಡಲಾಗಿದೆ. ಹೊಸ ಮ್ಯಾನುವಲ್ ಪ್ರಕಾರ ಮೆಡಿಕಲ್ ಬೆಡ್ ಮತ್ತು ದಿಂಬು ಕೊಡಲು ಅವಕಾಶ ಇದೆ. ಎರಡು ದಿನದಲ್ಲಿ ಮೂಲ ಸೌಲಭ್ಯ ನೀಡದಿದ್ದರೆ ಮಾನವ ಹಕ್ಕುಗಳ‌ ಆಯೋಗಕ್ಕೆ ದೂರು ನೀಡುತ್ತೇವೆ. ನ್ಯಾಯಾಲಯದಿಂದ ಬಂದಿರುವ ಆದೇಶದ ಬಗ್ಗೆ ಜೈಲ್ ಅಧಿಕಾರಿಗೆ ಮನವರಿಕೆ ಮಾಡಿ‌ಕೊಟ್ಟಿದ್ದೇವೆ ಎಂದು ತಿಳಿಸಿದರು.

ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್​ 27ರಂದು ನಡೆಯಲಿದೆ. ಪಬ್ಲಿಕ್ ಪ್ರಾಸಿಕ್ಯೂಟರ್​ ಸಮಯ ತೆಗೆದುಕೊಂಡಿದ್ದಾರೆ. ಬೇಲ್​ ಅರ್ಜಿ ರಿಜೆಕ್ಟ್​ ಆದರೆ ಹೈಕೋರ್ಟ್​ಗೆ ಹೋಗುತ್ತೇವೆ. ನೂರಕ್ಕೆ ನೂರರಷ್ಟು ಜಾಮೀನು ಸಿಗುವ ವಿಶ್ವಾಸವಿದೆ. ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ನಮಗೆ ಕೆಲವೊಂದು ಡೌಟ್ಸ್ ಇತ್ತು, ಎಲ್ಲಾ ಕ್ಲಾರಿಫಿಕೇಷನ್ ತಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ದರ್ಶನ್​ ಅವರಿಗೆ ಬೆನ್ನು ನೋವಿದ್ದು, ಮೆಡಿಕಲ್ ಅವಕಾಶಗಳನ್ನ ಕನ್ಸಿಡರ್ ಮಾಡೋದಕ್ಕೆ ಜೈಲು ಅಧಿಕಾರಿಗಳಿಗೆ ಹೇಳಿದ್ದೇವೆ. ಮೂಲಭೂತ ಸೌಲಭ್ಯ ಕೊಡಿ ಅಂತಾ ಹೇಳಿದ್ದೇವೆ. ಹೊಸ ಮ್ಯಾನುವಲ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮೀಡಿಯಾದಲ್ಲಿ ಬರುತ್ತೆ ಎಂದು ಸೌಲಭ್ಯ ತಿರಸ್ಕಾರ ಮಾಡುವಂತಿಲ್ಲ. ನಮ್ಮ ಬೇಡಿಕೆ ರಿಜೆಕ್ಟ್ ಮಾಡಿದ್ರೆ ನ್ಯಾಯಲಯದ ಗಮನಕ್ಕೆ ತರುತ್ತೇವೆ. ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡೋದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಸೌಲಭ್ಯ ಸಿಗುವ ವಿಶ್ವಾಸವಿದೆ ಎಂದು ನಟ ದರ್ಶನ್​ ಪರ ವಕೀಲ ಸುನೀಲ್​ ಹೇಳಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!