Wednesday, September 28, 2022

Latest Posts

ಸ್ಟಾರ್‌ಬಕ್ಸ್‌ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾಫೀ ಮಳಿಗೆಗಳ ಜಾಗತಿಕ ದೈತ್ಯ ಸ್ಟಾರ್‌ ಬಕ್ಸ್‌ ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ(ಸಿಇಒ) ಭಾರತೀಯ ಮೂಲದ ಲಕ್ಷ್ಮಣ್‌ ನರಸಿಂಹನ್‌ ಅವರನ್ನು ನೇಮಿಸಲಾಗಿದೆ. ಇನ್ನು ಮುಂದೆ ಸ್ಟಾರ್‌ ಬಕ್ಸ್‌ ನ ಎಲ್ಲಾ ಕಾರ್ಯಾಚರಣೆಗಳನ್ನು ಅವರೇ ನೋಡಿಕೊಳ್ಳಲಿದ್ದಾರೆ.

ಲಕ್ಷ್ಮಣ್ ನರಸಿಂಹನ್ ಅವರು ಈ ಹಿಂದೆ ರೆಕಿಟ್‌ನ ಸಿಇಒ ಆಗಿದ್ದರು. ಇದು ಎನ್‌ಫಾಮಿಲ್ ಬೇಬಿ ಫಾರ್ಮುಲಾ ಮತ್ತು ಮ್ಯೂಸಿನೆಕ್ಸ್ ಕೋಲ್ಡ್ ಸಿರಪ್, ಡ್ಯೂರೆಕ್ಸ್‌ ಮುಂತಾದ ಉತ್ಪನ್ನಗಳನ್ನು ತಯಾರಿಸುತ್ತದೆ. ಪ್ರಸ್ತುತ 55 ವರ್ಷದವರಾಗಿರುವ ಲಕ್ಷ್ಮಣ್‌ ಅವರು ಈ ಹಿಂದೆ ಪ್ರಸಿದ್ಧ ತಂಪುಪಾನೀಯ ಕಂಪನಿ ಪೆಪ್ಸಿಕೋದ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ. ಅವರು ಪ್ರಸ್ತುತ ಸ್ಟಾರ್‌ ಬಕ್ಸ್‌ ನ ಸಿಇಒ ಆಗಿರುವ ಹೋವರ್ಡ್ ಶುಲ್ಟ್ಜ್ ಅವರನ್ನು ಬದಲಾಯಿಸಲಿದ್ದಾರೆ.

ಇದೇ ಮುಂಬರುವ ಅಕ್ಟೋಬರ್‌ ತಿಂಗಳಿನಿಂದ ಲಕ್ಷ್ಮಣ್ ನರಸಿಂಹನ್ ಕಂಪನಿಗೆ ಸೇರಲಿದ್ದಾರೆ. ಆದರೆ 2023ರ ಎಪ್ರಿಲ್‌ ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಅಲ್ಲಿಯವರೆಗೆ ಹಂಗಾಮಿ ಸಿಇಒ ಹೊವಾರ್ಡ್ ಷುಲ್ಟ್ಜ್ ಕಂಪನಿಯನ್ನು ಮುನ್ನಡೆಸಲಿದ್ದು ಲಕ್ಷ್ಮಣ್ ನರಸಿಂಹನ್ ಅವರು ಏಪ್ರಿಲ್ 1 ರವರೆಗೆ ಹಾವರ್ಡ್ ಶುಲ್ಟ್ಜ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!