ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಕಾಫಿ ದೈತ್ಯ ಸ್ಟಾರ್‌ಬಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಕಾರ್ಯನಿರ್ವಾಹಕ ಲಕ್ಷ್ಮಣ್ ನರಸಿಂಹನ್ ಅಧಿಕಾರ ವಹಿಸಿಕೊಂಡಿದ್ದಾರೆ. ಆ ಮೂಲಕ ಜಾಗತಿಕ ವ್ಯಾಪಾರ ನಿಗಮಗಳ ಚುಕ್ಕಾಣಿ ಹಿಡಿದಿರುವ ಭಾರತೀಯ ವ್ಯಾಪಾರ ನಾಯಕರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ನರಸಿಂಹನ್ ಅವರು ಕಂಪನಿಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಟಾರ್‌ಬಕ್ಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗುತ್ತಾರೆ ಎಂದು ಸ್ಟಾರ್‌ಬಕ್ಸ್ ಘೋಷಿಸಿತ್ತು.
ಕಂಪನಿಯ ಸಂಸ್ಥಾಪಕ ಮತ್ತು ಮಾಜಿ CEO, ಹೊವಾರ್ಡ್ ಷುಲ್ಟ್ಜ್ ನಂತರದಲ್ಲಿ ಅವರ ಉತ್ತರಾಧಿಕಾರಿಯಾಗಿ ನರಸಿಂಹನ್ ಅಧಿಕಾರ ವಹಿಸಿಕೊಂಡಿದ್ದಾರೆ.
“ಇಂದಿನಿಂದ ಜಾರಿಯಾಗುವಂತೆ, ಲಕ್ಷ್ಮಣ್ ನರಸಿಂಹನ್ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪಾತ್ರವನ್ನು ವಹಿಸಿಕೊಂಡಿದ್ದಾರೆ ಮತ್ತು ಕಂಪನಿಯ ನಿರ್ದೇಶಕರ ಮಂಡಳಿಗೆ ಸೇರಿಕೊಳ್ಳಲಿದ್ದಾರೆ” ಎಂದು ಸ್ಟಾರ್‌ಬಕ್ಸ್ ಹೇಳಿಕೆಯಲ್ಲಿ ತಿಳಿಸಿದೆ. ನರಸಿಂಹನ್ ಅವರು ಮಾರ್ಚ್ 23 ರಂದು ಸ್ಟಾರ್‌ಬಕ್ಸ್ ವಾರ್ಷಿಕ ಷೇರುದಾರರ ಸಭೆಯನ್ನು ಮುನ್ನಡೆಸಲಿದ್ದಾರೆ.