Friday, June 9, 2023

Latest Posts

ಭಾರತೀಯ ಖಾದ್ಯಗಳಿಗೆ ಮನಸೋತ ಜಪಾನ್ ಪ್ರಧಾನಿ, ಗೋಲ್‌ಗಪ್ಪಾ ಬೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್ ಪ್ರಧಾನಿ ಫೆಮಿಯೊ ಕಿಶಿದಾ ಅವರು ಭಾರತಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಇದರ ಜತೆಗೆ ಭಾರತೀಯ ಖಾದ್ಯಗಳನ್ನು ಸವಿದಿದ್ದು, ಗೋಲ್‌ಗಪ್ಪಾ ತಿಂದು ಖುಷಿಯಾಗಿದ್ದಾರೆ. ದೆಹಲಿಯ ಬುದ್ಧ ಜಯಂತಿ ಉದ್ಯಾನದಲ್ಲಿ ಹಲವು ಖಾದ್ಯಗಳ ಸ್ಟಾಲ್‌ನ್ನು ಹಾಕಲಾಗಿದ್ದು, ಪ್ರಧಾನಿ ಮೋದಿ ಹಾಗೂ ಕಿಶಿದಾ ಅವರು ಖಾದ್ಯಗಳನ್ನು ಸವಿದಿದ್ದಾರೆ.

ಎರಡು ದಿನಗಳ ಜಪಾನ್ ಪ್ರಧಾನಿ ಕಿಶಿದಾ ಭೇಟಿ ವೇಳೆ ಉಭಯ ರಾಷ್ಟ್ರಗಳ ನಡುವಿನ ಹೊಸ ಹೂಡಿಕೆಗಳ ಬಗ್ಗೆ ಮಾತನಾಡಲಾಗಿದೆ, ಶೃಂಗಸಭೆಯಯಲ್ಲಿ ದ್ವಿಪಕ್ಷೀಯ ಸಹಭಾಗಿತ್ವ ಬಲಪಡಿಸುವ ಬಗ್ಗೆ ಹಾಗೂ ಎರಡೂ ರಾಷ್ಟ್ರಗಳ ಆರ್ಥಿಕ ಸಹಕಾರ ಹೆಚ್ಚಿಸುವ ಬಗ್ಗೆ ಮಾತನಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!