ಖಾಸಗಿ ಶಾಲೆಯಲ್ಲಿ ‘ಕಲ್ಮ’ ಕಲಿಕೆ: ಆಡಳಿತ ಮಂಡಳಿ ವಿರುದ್ಧ ಪೋಷಕರು ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಶಾಲೆಯು ವಿವಾದದ ಸುಳಿಗೆ ಸಿಲುಕಿದೆ. ಇಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಕಲ್ಮ ಕಲಿಸುತ್ತಿದ್ದಾರೆ ಎಂದು ಹಲವಾರು ಪೋಷಕರು ದೂರಿದ್ದಾರೆ. ಸುದ್ದಿ ತಿಳಿದ ಕೂಡಲೇ ಉತ್ತರ ಪ್ರದೇಶ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸೋಮವಾರ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹಿಂದೂ ವಿದ್ಯಾರ್ಥಿಗಳಿಗೆ ಕಲ್ಮ ಕಲಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಖಾಸಗಿ ಶಾಲೆಯ ವಿರುದ್ಧ ದೂರು ದಾಖ ಲಾಗಿತ್ತು. ಈ ಆಪಾದನೆಗೆ ಶಾಲಾ ಆಡಳಿತ ಮಂಡಳಿಯು ಪ್ರತಿಕ್ರಿಯಿಸಿದ್ದು, ಸರ್ವ ಧರ್ಮ ಸಮ್ಮಾನ್ ಸಿದ್ಧಾಂತವನ್ನು ಹೆಚ್ಚಿಸಲು ಬೆಳಿಗ್ಗೆ ಅಸೆಂಬ್ಲಿ ಸಮಯ ದಲ್ಲಿ ಎಲ್ಲಾ ನಾಲ್ಕು ಧರ್ಮಗಳ ಪ್ರಾರ್ಥನೆಗಳನ್ನು ಶಾಲೆಯಲ್ಲಿ ಓದಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!