ಇಲ್ನೋಡಿ ಇಲ್ನೋಡಿ… ಪ್ರಪಂಚ ಅಂತ್ಯವಾಗುವ ಸಮಯದ ಕೊನೆಯ ‘ಸೆಲ್ಫೀ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಪಂಚ ಅಂತ್ಯವಾಗುವ ಕ್ಷಣದಲ್ಲಿ ಕೊನೆಯದಾಗಿ ತೆಗೆ ಸೆಲ್ಫಿ ಹೇಗಿರಬಹುದು? ಈ ಒಂದು ಕುತೂಹಲ ತಣಿಸುವ ಯತ್ನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರೋಬೋಟ್ ಓವರ್‍ಲೋಡ್ ಟಿಕ್‌ಟಾಕ್‌ನಲ್ಲಿ ಇದರ ಸೆಲ್ಫಿಗಳನ್ನು ಹಂಚಿಕೊಂಡಿದ್ದು, ಭಾರೀ ಜನಪ್ರೀಯತೆ ಗಳಿಸುತ್ತಿದೆ.

ಇವು ಭೂಮಿಯ ಮೇಲಿನ ಕೆಲವು ಕೊನೆಯ ಚಿತ್ರಗಳಾಗಿರುತ್ತವೆ… ಎಂದು ಊಹನೆಯ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದ್ದು, ದೊಡ್ಡ ಕಣ್ಣುಗಳು, ಉದ್ದನೆಯ ಬೆರಳುಗಳು, ಉದ್ದನೆಯ ಕೂದಲನ್ನು ಹೊಂದಿರುವ ಮನುಷ್ಯನನ್ನು ಈ ಚಿತ್ರ ತೋರಿಸುತ್ತದೆ. ಮನುಷ್ಯನ ಹಿಂಭಾಗದಲ್ಲಿ ಭೂಮಿ ಸುಡುತ್ತಿರುವ ದೃಶ್ಯಗಳಿವೆ. ಜಾಲತಾಣದಲ್ಲಿ ಪೋಸ್ಟ್ ಆದ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನ ನೋಡಿದ ಚಿತ್ರ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!