ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಯ ಎಡಪಂಥೀಯ ನಾಯಕ ಅನುರ ಕುಮಾರ ಡಿಸಾನಾಯಕೆ ಗೆಲುವು ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿದರು ಮತ್ತು ದ್ವೀಪ ರಾಷ್ಟ್ರದ ಒಂಬತ್ತನೇ ಕಾರ್ಯಕಾರಿ ಅಧ್ಯಕ್ಷರಾಗಲಿದ್ದಾರೆ ಎಂದು ಶ್ರೀಲಂಕಾದ ಚುನಾವಣಾ ಆಯೋಗವು ಸೆಪ್ಟೆಂಬರ್ 22 ರ ಭಾನುವಾರದಂದು ಘೋಷಿಸಿದೆ .
ಅಧಿಕೃತ ಅಂಕಿಅಂಶಗಳ ಪ್ರಕಾರ, 55 ವರ್ಷದ ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ಡಿಸಾನಾಯಕೆ 56.34 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ. ಪ್ರತಿಪಕ್ಷದ ನಾಯಕ ಸಜಿತ್ ಒರೆಮದಾಸ 43.63 ಲಕ್ಷ ಮತಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ವಿಕ್ರಮಸಿಂಘೆ 22.99 ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.
ಶನಿವಾರ ನಡೆದ ಚುನಾವಣೆಯಲ್ಲಿ ಪೀಪಲ್ಸ್ ಲಿಬರೇಷನ್ ಫ್ರಂಟ್ ನ 55ರ ಹರೆಯದ ನಾಯಕ ಅನುರ ಕುಮಾರ ಡಿಸಾನಾಯಕ ಶೇ.42.31ರಷ್ಟು ಮತ ಪಡೆದು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಎಡಪಂಥೀಯ ಒಕ್ಕೂಟವಾದ ಪೀಪಲ್ಸ್ ಲಿಬರೇಶನ್ ಫ್ರಂಟ್ (ಜೆವಿಪಿ) ಯ 55 ವರ್ಷದ ನಾಯಕ ಭಾನುವಾರ ಸಂಪೂರ್ಣ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮುನ್ನವೇ ಗೆಲುವಿನ ಟ್ವೀಟ್ ಮಾಡಿದ್ದರು. “ಈ ಗೆಲುವು ನಮ್ಮೆಲ್ಲರಿಗೂ ಸೇರಿದ್ದು” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ, ಚುನಾವಣಾ ಆಯೋಗವು ಅವರ ಮುನ್ನಡೆಯನ್ನು ಈ ವೇಳೆ ಖಚಿತಪಡಿಸಿತ್ತು.
ಕೊಲಂಬೊದ ವಸಾಹತುಶಾಹಿ ಯುಗದ ಅಧ್ಯಕ್ಷೀಯ ಕಾರ್ಯದರ್ಶಿ ಕಚೇರಿಯಲ್ಲಿ ಸೋಮವಾರ ಡಿಸಾನಾಯಕೆ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.