ಬಾಕ್ಸಿಂಗ್‌ ನಿಂದ ವಿದಾಯ ಘೋಷಿಸಿದ ಇಂಗ್ಲೆಂಡ್‌ ನ ಬಾಕ್ಸಿಂಗ್‌ ಲೆಜೆಂಡ್‌ ಅಮೀರ್ ಖಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಗ್ಲೆಂಡ್‌ನ ಲೆಜೆಂಡರಿ ಬಾಕ್ಸಿಂಗ್ ಪಟು ಮತ್ತು ವಿಶ್ವ ಬಾಕ್ಸಿಂಗ್‌ ಚಾಂಪಿಯನ್ ಅಮೀರ್ ಖಾನ್‌ ತಮ್ಮ ವೃತ್ತಿ ಜೀವನದಿಂದ ವಿದಾಯ ಘೋಷಿಸಿದ್ದಾರೆ. ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಖಾನ್‌ ತಮಗೆ ಸರಿಸಮನಾದ ತಾರೆಗಳಾದ ಕನೆಲೋ’ ಅಲ್ವಾರೆಜ್ ಮತ್ತು ಟೆರೆನ್ಸ್ ಕ್ರಾಫೋರ್ಡ್ ಅವರನ್ನು ಎದುರಿಸಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೂ 40 ಪಂದ್ಯಗಳನ್ನಾಡಿರುವ ಖಾನ್‌ ಒಟ್ಟೂ 6 ಪಂದ್ಯಗಳಲ್ಲಿ ಸೋತಿದ್ದು ಉಳಿದ 34 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದಾರೆ.

ಅವರು 2005ರಲ್ಲಿ ಪ್ರೊ ಬಾಕ್ಸಿಂಗ್‌ ಗೆ ಹೋಗುವ ಮೊದಲು 2004ರ ಒಲಂಪಿಕ್ಸ್‌ ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಅವರು ಜುಲೈ 2009 ರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಈ ಕುರಿತು ಟ್ವಿಟರ್‌ ನಲ್ಲಿ ಖಾನ್‌ “ಇದು ನನ್ನ ಕೈಗವಸುಗಳನ್ನು ಸ್ಥಗಿತಗೊಳಿಸುವ ಸಮಯ. 27 ವರ್ಷಗಳಿಂದಲೂ ಇಂತಹ ಅದ್ಭುತ ವೃತ್ತಿಜೀವನವನ್ನು ಹೊಂದಲು ಭಗವಂತನ ಆಶೀರ್ವಾದವೇ ಕಾರಣ. ನಾನು ಕೆಲಸ ಮಾಡಿದ ತಂಡಗಳಿಗೆ ಮತ್ತು ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಅವರು ನನಗೆ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!