ರಾಷ್ಟ್ರಪತಿಗಳ ಎ.ಡಿ.ಸಿ ಯಾಗಿ ಕೊಡಗಿನ ಲೆ.ಜ. ಕಾರ್ಯಪ್ಪ ನಿಯುಕ್ತಿ

ಹೊಸದಿಗಂತ ವರದಿ, ಮಡಿಕೇರಿ:

ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ ರಾಷ್ಟ್ರಪತಿಗಳ ಪರ್ಸನೆಲ್ ಆಫೀಸರ್ (ಎ.ಡಿ.ಸಿ-(J.r.¹ – Aide de.Camp) DV) ಆಗಿ ಕೊಡಗಿನವರಾದ ಲೆಫ್ಟಿನೆಂಟ್ ಜನರಲ್ ಕೋದಂಡ ಪಿ.ಕಾರ್ಯಪ್ಪ ಅವರು ನಿಯುಕ್ತಿಗೊಂಡಿದ್ದಾರೆ.
ಇದೊಂದು ಗೌರವಯುತವಾದ ಸ್ಥಾನವಾಗಿದ್ದು, ಸೇನಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಮತ್ತೊಂದು ಹಿರಿಮೆಯಾಗಿದೆ.
ಲೆ.ಜ.ಕೋದಂಡ ಕಾರ್ಯಪ್ಪ ಅವರು ಕೆಲವು ಸಮಯದ ಹಿಂದೆ ಹೊಸದಾಗಿ ಸೃಷ್ಟಿಯಾಗಿರುವ ಮಾಸ್ಟರ್ ಜನರಲ್ ಸಸ್ಟೆನೆನ್ಸ್ (ಎಂ.ಜಿ.ಎಸ್) ಆಗಿಯೂ ಅಲ್ಲದೆ ಪ್ರಿನ್ಸಿಪಲ್ ಸ್ಟಾಫ್ ಆಫೀಸರ್ ಟು ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿಯೂ ನಿಯುಕ್ತಿಗೊಂಡಿದ್ದರು.
ಮಾತ್ರವಲ್ಲದೆ, ರಜಪೂತ್ ರೈಫಲ್ಸ್‍ನ ಮುಖ್ಯಸ್ಥರೂ ಇವರಾಗಿದ್ದಾರೆ. ಇದೀಗ ಈ ಸ್ಥಾನದೊಂದಿಗೆ ಕಾರ್ಯಪ್ಪ ಅವರು ರಾಷ್ಟ್ರಪತಿಗಳ ಎ.ಡಿ.ಸಿ.ಯಾಗಿಯೂ ನೇಮಕಗೊಂಡಿದ್ದು, ಮಾಸ್ಟರ್ ಜನರಲ್ ಸಸ್ಟೆನೆನ್ಸ್ (ಸಶಸ್ತ್ರ ವಿಭಾಗ) ಪ್ರಥಮ ಅಧಿಕಾರಿಯಾಗಿ ಈ ಮೂಲಕ ರಾಷ್ಟ್ರಪತಿಗಳ ಎ.ಡಿ.ಸಿ.ಯಾಗಿರುವ ಪ್ರಥಮ ಅಧಿಕಾರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!