ಹೊಸದಿಗಂತ ವರದಿ,ಹೊನ್ನಾವರ:
ತಾಲೂಕಿನಲ್ಲಿ ಮತ್ತೆ ಚಿರತೆ ಕಾಟ ಆರಂಭವಾಗಿದ್ದು ಸಂತೇಗುಳಿ ಸಮೀಪ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕನ ಮೇಲೆ ಚಿರತೆ ದಾಳಿ ಮಾಡಿ ಗಾಯಪಡಿಸಿದ ಘಟನೆ ನಡೆದಿದೆ.
ಕೆರೆಕೋಣ ನಿವಾಸಿಯಾಗಿರುವ ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ ಆರ್ ಭಟ್, ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಕಾಲಿನ ಭಾಗಕ್ಕೆ ಗಾಯನೋವಾಗಿದೆ. ಹೊನ್ನಾವರಕ್ಕೆ ಹೋಗಿ ವಾಪಸ್ಸು ಮನೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಸಂತೆಗುಳಿ ಸಮೀಪ ಚಿರತೆ ದಾಳಿ ಮಾಡಿ ಕಾಲಿನ ಭಾಗಕ್ಕೆ ಗಾಯಗೊಳಿಸಿದ್ದು ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.