August 29, 2026
Saturday, August 29, 2026
spot_img

ಹಂಪಿಯಲ್ಲಿ ಚಿರತೆ ಅಟ್ಟಹಾಸ: ಹೊಲದಲ್ಲಿದ್ದ ರೈತನ ಮೇಲೆ ಏಕಾಏಕಿ ದಾಳಿ

ಹೊಸದಿಗಂತ ವರದಿ ವಿಜಯನಗರ:

ವಿಶ್ವವಿಖ್ಯಾತ ಹಂಪಿ‌ ಸಮೀಪದ ಕಡ್ಡಿರಾಂಪುರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಶುಕ್ರವಾರ ರಾತ್ರಿ ಹೊಲದಲ್ಲಿ ನೀರು ಕಟ್ಟುತ್ತಿರುವಾಗ ಚಿರತೆ ದಾಳಿ ನಡೆಸಿದೆ. ರೈತ ಖಾರದಪುಡಿ ರಾಜು(40) ಎಂಬಾತನ ಕಾಲಿಗೆ ಪರಚಿ ತೀವ್ರವಾಗಿ ಗಾಯಗೊಳಿಸಿದೆ. ಗಾಯಾಳಿಗೆ ಹೊಸಪೇಟೆ ‌ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:

ನಾಲ್ಕೈದು ದಿನಗಳ ಹಿಂದೆಯಷ್ಟೇ ಹಂಪಿಯ ಜನತಾ ಪ್ಲಾಟ್ ನಲ್ಲಿ ತಡ ರಾತ್ರಿ ಚಿರತೆ ಕಾಣಿಸಿಕೊಂಡಿರುವ‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಬೆನ್ನಲ್ಲೇ, ಇದೀಗ ರೈತನೊಬ್ಬನ ಮೇಲೆ ದಾಳಿ ನಡೆಸಿದೆ. ಈ ಘಟನೆಯಿಂದ ಹಂಪಿ ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !