October 14, 2026
Wednesday, October 14, 2026
spot_img

ದಾಂಡೇಲಿಯ ಹೋಂ ಸ್ಟೇ ಆವರಣದಲ್ಲಿ ಚಿರತೆ ಓಡಾಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಸ್ಥಳೀಯರಲ್ಲಿ ಆತಂಕ

ಹೊಸದಿಗಂತ ವರದಿ ದಾಂಡೇಲಿ:

ನಗರದ ಐಪಿಎಂ ಪ್ರದೇಶದಲ್ಲಿರುವ ಹೋಂ ಸ್ಟೇಯೊಂದರ ಆವರಣದೊಳಗೆ ಚಿರತೆ ನುಗ್ಗಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.  ಹೋಂ ಸ್ಟೇಯ ಸಿಸಿಟಿವಿಯಲ್ಲಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದ್ದು, ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ:

ಇದಕ್ಕೂ ಮೊದಲು ಕಾಡಂಚಿನ ಗ್ರಾಮಗಳಾದ ಅಂಬೇವಾಡಿ, ಹಸನ್ಮಾಳದ ಸುತ್ತಮುತ್ತ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಪ್ಪು ಚಿರತೆ ಮತ್ತು ಸಾಮಾನ್ಯ ಚಿರತೆಗಳು, ಇದೀಗ ನಗರದ ಜನವಸತಿ ಪ್ರದೇಶಗಳಾದ ಪಟೇಲ್ ನಗರ, ಸಾಯಿನಗರ, ಮಾರುತಿ ನಗರ, ಗಾಂಧಿನಗರಗಳಲ್ಲಿ ನಿರಂತರವಾಗಿ ಅಡ್ಡಾಡಲು ಶುರು ಮಾಡಿವೆ. ಇದೀಗ ಐಪಿಎಂ ಪ್ರದೇಶಕ್ಕೂ ಕಾಲಿಟ್ಟಿರುವುದು, ಚಿರತೆ ನಾಡಿನಲ್ಲೇ ನೆಲೆಸುವ ಲಕ್ಷಣ ತೋರುತ್ತಿದೆ ಎಂಬ ಆತಂಕವನ್ನು ಮೂಡಿಸಿದೆ.

Must Read