ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಜಿಲ್ಲೆಯ ಇನ್ಪೋಸಿಸ್ ಕ್ಯಾಂಪಸ್ ನಲ್ಲಿನ ಕಾಣಿಸಿಕೊಂಡ ಚಿರತೆಗಾಗಿ ಕಳೆದ 16 ದಿನಗಳಿಂದ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೇ ಈವರೆಗೆ ಚಿರತೆ ಚಲನವಲನ ಪತ್ತೆಯಾಗದ ಕಾರಣ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ 16 ದಿನಗಳಿಂದ ಇನ್ಪೋಸಿಸ್ ಕ್ಯಾಂಪಸ್ ನಲ್ಲಿ ಚಿರತೆ ಸೆರೆಗಾಗಿ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿದ್ದರು. ಕ್ಯಾಮರಾ ಟ್ರ್ಯಾಕರ್, ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆಗೆ ಇಳಿಯಲಾಗಿತ್ತು.
ಆದರೆ ಈವರೆಗೆ ಚಿರತೆಯ ಯಾವುದೇ ಚಲನವಲನ ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಚಿರತೆ ಇರುವಿಕೆಯ ಬಗ್ಗೆಯೂ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಕ್ಯಾಂಪಸ್ ಸೇರಿದಂತೆ ಹೊರ ಪ್ರದೇಶದಲ್ಲೂ ಚಿತರೆ ಇರುವಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಆದರೇ ಅಲ್ಲಿಯೂ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ ಚಿರತೆ ಪತ್ತೆಯಾಗಿಲ್ಲ.
ಚಿರತೆ ಸೆರೆಗಾಗಿ ಏರಿಯಲ್ ಸರ್ಚ್ ಗಾಗಿ 2 ಡ್ರೋನ್ ಕೂಡ ಬಳಕೆ ಮಾಡಲಾಗಿತ್ತು. ಆದರೇ ಈವರೆಗೆ ಚಿರತೆ ಸುಳಿವು ಸಿಕ್ಕಿಲ್ಲ. ಈ ಎಲ್ಲಾ ಕಾರಣದಿಂದ ರಾತ್ರಿ ವೇಳೆ ನಿಗಾ, ಶೋಧ ಕಾರ್ಯಾಚರಣೆ ಮುಂದುವರೆಸಿ, ಚಿರತೆ ಸೆರೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.