Thursday, March 23, 2023

Latest Posts

ಚಿರತೆಯನ್ನು ರಕ್ಷಿಸಲು ಖುದ್ದು ಬಾವಿಗಿಳಿದ ಪಶುವೈದ್ಯೆ ಡಾ.ಮೇಘನಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಒಂದು ವರ್ಷ ಪ್ರಾಯದ ಹೆಣ್ಣು ಚಿರತೆ ಮರಿಯನ್ನು ಪಶುವೈದ್ಯೆ ಬೋನಿನೊಳಗಿದ್ದು ಬಾವಿಗಿಳಿದು ರಕ್ಷಿಸಿ ಮೇಲಕ್ಕೆ ತಂದ ಘಟನೆ ಭಾನುವಾರ ಮುಲ್ಕಿ ಸಮೀಪದ ನಿಡ್ಡೋಡಿಯಲ್ಲಿ ನಡೆದಿದೆ.

ಬಾವಿ ಮೂವತ್ತಡಿಗಿಂತಲೂ ಆಳವಾಗಿದ್ದು ಬಾವಿಯ ಒಳಗೆ ಒಂದು ಬದಿಯಲ್ಲಿದ್ದ ದೊಡ್ಡ ಬಿಲದಲ್ಲಿ ಅಡಗಿಕೊಳ್ಳುತ್ತಿದ್ದ ಈ ಚಿರತೆ ಮರಿ ಅರಣ್ಯ ಇಲಾಖೆಯವರು ಇಳಿಸಿದ ಬೋನಿನೊಳಗೂ ಬರುತ್ತಿರಲಿಲ್ಲ . ಆಗ ಇಲಾಖೆಯ ಕರೆ ಮೇರೆಗೆ ಎನ್‌ಜಿಓ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ತಜ್ಞ ಪಶುವೈದ್ಯರಾದ ಡಾ. ಯಶಸ್ವಿ, ಡಾ. ಮೇಘನಾ , ಡಾ. ಪೃಥ್ವೀ, ಡಾ. ನಫೀಸಾ ಸ್ಥಳಕ್ಕಾಗಮಿಸಿದರು.

ಡಾ. ಮೇಘನಾ ಅವರು ಅರಿವಳಿಕೆ ಲೋಡ್ ಮಾಡಿದ ಡಾರ್ಟ್ ಗನ್ ಹಿಡಿದುಕೊಂಡು ಬೋನಿನೊಳಗೆ ಕುಳಿತರು. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಊರವರು ಸೇರಿಕೊಂಡು ಅವರನ್ನು ಬಾವಿಗಳಿಸಿದರು. ಅಲ್ಲಿ ನಡೆಯಿತು ಅರಿವಳಿಕೆ ಮದ್ದಿನ ಪ್ರಯೋಗ. ಮತ್ತೆ ಅರಣ್ಯ ಇಲಾಖೆಯ ಸಿಬ್ಬಂದಿ ಮೂಲಕ ಬೋನಿನೊಳಗೆ ಹಾಕಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!