Thursday, March 30, 2023

Latest Posts

ಚಿನ್ನದ ಅಂಗಡಿ ಮಾಲಿಕನ ಮೇಲೆ ಗುಂಡಿನ ದಾಳಿ: ಇಬ್ಬರು ದುಷ್ಕರ್ಮಿಗಳು ವಶಕ್ಕೆ

ಹೊಸ ದಿಗಂತ ವರದಿ, ವಿಜಯಪುರ:

ಚಿನ್ನದ ಅಂಗಡಿ ಮಾಲೀಕನ ಮೇಲೆ ಐವರು ಗುಂಡಿನ ದಾಳಿ ಮಾಡಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಶಾಂತಿವೀರ ಮಠದ ಬಳಿ ಸೋಮವಾರ ನಡೆದಿದೆ.

ಇಲ್ಲಿನ ಕಾಳು ಪತ್ತಾರ ಎಂಬಾತನ ಮೇಲೆ ಐವರು ಫೈರಿಂಗ್‌‌ ಮಾಡಿದ್ದು, ಗುಂಡುಗಳು ವ್ಯಾಪಾರಿಯ ಪಕ್ಕದಿಂದ ಹಾಯ್ದು ಹೋಗಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಗುಂಡಿನ ಸದ್ದು ಕೇಳಿದಕ್ಕೆ ಸ್ಥಳೀಯರು ಜಮಾಯಿಸಿದ್ದು, ಗುಂಡು ಹಾರಿಸಿದ ಆಗುಂತಕರು ಪರಾರಿಯಾಗಲು ಯತ್ನಿಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಎರಡು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ಪೈಕಿ, ಇಬ್ಬರು ಸಾರ್ವಜನಿಕರ ಕೈಗೆ ಸಿಕ್ಕಿ ಬಿದಿದ್ದು, ಮೂವರು ಪರಾರಿಯಾಗಿದ್ದಾರೆ.

ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಒಂದು ಕಂಟ್ರಿ ಪಿಸ್ತೂಲ್, ಮೂರು ಜೀವಂತ ಗುಂಡು, 4 ಮಚ್ಚು ಹಾಗೂ ಬೈಕ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!