ದಾಸೋಹ ದಿನ ವಿಶಿಷ್ಟ ಕಾರ್ಯಕ್ರಮವಾಗಿ ಆಚರಣೆಯಾಗಲಿ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ತುಮಕೂರು:

ಫೆಬ್ರವರಿ ತಿಂಗಳಿನಲ್ಲಿ ದಾಸೋಹ ದಿನವನ್ನು ವಿಶಿಷ್ಟವಾದ ಕಾರ್ಯಕ್ರಮವಾಗಿ ಇಡೀ ರಾಜ್ಯದಲ್ಲಿ ಆಚರಣೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ: ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದಾಸೋಹ ದಿನ: ರಜೆ ಘೋಷಣೆ ಇಲ್ಲ
ದಾಸೋಹ ದಿನದ ಪ್ರಯುಕ್ತ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ದಾಸೋಹ ಮಂಟಪಗಳು ಮಠಮಾನ್ಯಗಳಲ್ಲಿ ಆಗಬೇಕು. ಇದರ ಆಚರಣೆಗೆಂದು ರಜೆ ಘೋಷಿಸುವುದಿಲ್ಲ. ಆದರೆ ಗೌರವ ಸಲ್ಲಿಸುವ ಕೆಲಸ ಮಾಡಲಾಗುವುದು. ಬಸವಣ್ಣ ಹಾಗೂ ಶಿವಕುಮಾರ ಸ್ವಾಮೀಜಿಗಳು ಕಾಯಕತತ್ವವನ್ನು ಪ್ರತಿಪಾದಿಸಿದ್ದು, ಅದರಂತೆ ನಾವು ನಡೆಯುತ್ತೇವೆ ಎಂದರು.

ಸ್ವಾಮೀಜಿಗಳ ಆಶೀರ್ವಾದ ನಾಡಿನ ಜನತೆ ಮೇಲಿದೆ
ನಡೆದಾಡುವ ದೇವರು , ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಗದ್ದುಗೆ ನಮಸ್ಕಾರ ಮಾಡಿದ್ದು, ಸಂತೋಷ, ಸಮಾಧಾನವಾವಿದೆ. ಅವರ ಆಶೀರ್ವಾದ ಈ ನಾಡಿನ ಜನತೆ ಮೇಲೆ ಇದೆ ಎಂಬ ಭಾವನೆಯಿಂದ ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.

ಪ್ರತಿಮೆ ಸ್ಥಾಪನೆಗೆ ವೇಗ
ಸ್ವಾಮೀಜಿ ಹುಟ್ಟೂರಿನಲ್ಲಿ ಅವರ ಪ್ರತಿಮೆ ಸ್ಥಾಪನೆ ಕುರಿತು ಪರಿಶೀಲಿಸಿದ್ದು, ಅದಕ್ಕೆ ವೇಗ ನೀಡಲಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!