SHOCKING NEWS | ಆರ್‌ಸಿಬಿ ಟ್ವಿಟರ್ ಖಾತೆ ಹ್ಯಾಕ್, ‘Bored Ape Yacht Club’ ಎಂದು ಹೆಸರು ಚೇಂಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ಗೂ ಮುನ್ನ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಶಾಕ್ ಎದುರಾಗಿದ್ದು, ತಂಡದ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದೆ.

ಅಕೌಂಟ್ ಹ್ಯಾಕ್ ಮಾಡಿದ ಹ್ಯಾಕರ‍್ಸ್ ಟ್ವಿಟರ್ ಹೆಸರನ್ನು ಬೋರ‍್ಡ್ ಆಪೆ ಯಾಚ್ ಕ್ಲಬ್ ಎಂದು ಬದಲಾಯಿಸಿದ್ದಾರೆ. ಇದರ ಜತೆಗೆ ಎನ್‌ಎಫ್‌ಟಿ ಸಂಬಂಧಿತ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಆರ್‌ಸಿಬಿ ಲೋಗೋ ಹಾಗೂ ಪ್ರೊಫೈಲ್ ಪಿಕ್ಚರ್‌ನ್ನು ಬದಲಾಯಿಸಿದ್ದಾರೆ.

ಹ್ಯಾಕರ‍್ಸ್‌ಗಳು ತಲೆ ಮರೆಸಿಕೊಂಡಿಲ್ಲ, ತಮ್ಮ ಅಧಿಕೃತ ವೆಬ್‌ಸೈಟ್‌ನ್ನೂ ಲಿಂಕ್ ಮಾಡಿದ್ದು, ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಕೃತ್ಯ ಎಸಗಿದ್ದು ಯಾರು ಎನ್ನುವ ಬಗ್ಗೆ ಮಾಹಿತಿ ದೊರೆತಿಲ್ಲ. ಈ ಹಿಂದೆ 20021 ರಲ್ಲಿಯೂ ಆರ್‌ಸಿಬಿ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!