ಆಭರಣ ರಫ್ತು ಹೆಚ್ಚಿಸೋಕೆ ಚಿನ್ನದ ಆಮದು ಸುಂಕ ಕಡಿಮೆ ಮಾಡಲು ಚಿಂತಿಸಿದೆ ವಾಣಿಜ್ಯ ಸಚಿವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ರತ್ನ ಮತ್ತು ಆಭರಣ ರಫ್ತು ಹೆಚ್ಚಿಸುವ ಉದ್ದೇಶದಿಂದ ಮುಂಬರುವ ಬಜೆಟ್‌ ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ವಾಣಿಜ್ಯ ಸಚಿವಾಲಯ ಚಿಂತಿಸುತ್ತಿದೆ ಎಂದು ಪಿಟಿಐ ವರದಿ ಹೇಳಿದೆ.

ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ಮತ್ತು ಹೆಚ್ಚುತ್ತಿರುವ ಚಿನ್ನದ ಆಮದನ್ನು ನಿಯಂತ್ರಿಸಲು ಸರ್ಕಾರವು ಈ ವರ್ಷ ಜುಲೈನಲ್ಲಿ ಚಿನ್ನದ ಆಮದು ಸುಂಕವನ್ನು 10.75ಶೇಕಡಾದಿಂದ 15 ಶೇಕಡಾಗೆ ಹೆಚ್ಚಿಸಿದೆ. ಆದರೆ “ರತ್ನಗಳು ಮತ್ತು ಆಭರಣ ಉದ್ಯಮವು ಸುಂಕ ಕಡಿತಕ್ಕೆ ವಾಣಿಜ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿರುವುದರಿಂದ, ವಾಣಿಜ್ಯ ಸಚಿವಾಲಯವು ಹಣಕಾಸು ಸಚಿವಾಲಯವನ್ನು ಒತ್ತಾಯಿಸಿದೆ. ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸಲು ಇತರ ಕೆಲವು ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಸಚಿವಾಲಯವು ಕೇಳಿದೆ” ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಆಭರಣಗಳು ಮತ್ತು ರತ್ನೋದ್ಯಮದಲ್ಲಿ ಭಾರತವು ಪ್ರಪಂಚದ ಉತ್ಪಾದನಾ ಮತ್ತು ದುರಸ್ತಿ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಆಮದು ಸುಂಕದಲ್ಲಿನ ಕಡಿತವು 300-400 ಮಿಲಿಯನ್ ಡಾಲರ್‌ ವರೆಗೆ ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ರತ್ನಗಳು ಮತ್ತು ಆಭರಣಗಳ ರಫ್ತುಗಳು ಏಪ್ರಿಲ್-ನವೆಂಬರ್ 2022 ರಲ್ಲಿ 2 ಶೇಕಡಾ ಏರಿಕೆಯಾಗಿ 26.45 ಶತಕೋಟಿ ಡಾಲರ್‌ ಗೆ ತಲುಪಿದೆ. ಪ್ರಸ್ತುತ ಸುಂಕ ಕಡಿತವು ರಫ್ತುಗಳನ್ನು ಹೆಚ್ಚಿಸಲು ಸಹಾಯಕವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!