July 12, 2026
Sunday, July 12, 2026
spot_img

ಗಾನಕೋಗಿಲೆಗೆ ಅಂತಿಮ ನಮನ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಇಂದು ಎಸ್.ಜಾನಕಿ ಅಂತ್ಯಸಂಸ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಚಿತ್ರರಂಗದ ದಂತಕಥೆ, ಸ್ವರ ಮಾಂತ್ರಿಕಿ ಎಸ್. ಜಾನಕಿ ಭೌತಿಕ ಕಾಯ ಇಂದು ಪಂಚಭೂತಗಳಲ್ಲಿ ವಿಲೀನವಾಗಲಿದೆ. ಅವರ ಮೂಲ ಹಿನ್ನೆಲೆಯಾದ ತೆಲುಗು ಬ್ರಾಹ್ಮಣ ಸಂಪ್ರದಾಯ ಹಾಗೂ ವಿಧಿ-ವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಮೊಮ್ಮಗಳಿಂದ ಅಂತಿಮ ವಿಧಿ-ವಿಧಾನ

ಎಸ್. ಜಾನಕಿ ಅವರ ಮಗನ ಮಗಳಾದ ಅಪ್ಸರಾ ವೈದ್ಯುಲ ರ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನಗಳು ಮತ್ತು ಧಾರ್ಮಿಕ ಪೂಜೆಗಳು ಜರುಗಲಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

 ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರು ಭಾಗಿಯಾಗಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.  ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆದಿದ್ದ ಜಾನಕಿಯಮ್ಮ, ತಮಗೆ ಅತ್ಯಂತ ಪ್ರಿಯವಾದ ಕನ್ನಡದ ಮಣ್ಣಿನಲ್ಲೇ ಇಂದು ಲೀನವಾಗಲಿದ್ದಾರೆ.

ಇದನ್ನೂ ಓದಿ:

ಸಂಗೀತ ಲೋಕದಲ್ಲಿ ಆವರಿಸಿದ ಮೌನ

ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾದ ಜಾನಕಿಯಮ್ಮ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಗಾನಸರಸ್ವತಿಯ ದನಿ ಇನ್ನು ನೆನಪು ಮಾತ್ರ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !