ಸೇವಾ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಲಿ: ಕೇಂದ್ರ ಸಚಿವ ಭಗವಂತ ಖೂಬಾ

ಹೊಸದಿಗಂತ ವರದಿ,ಕಲಬುರಗಿ

ಕಲಬುರಗಿ ಮಹಾನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿರುವ
ಸೇವಾ ರಸ್ತೆಗಳು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದು, ಕೂಡಲೆ ಇದನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಬೇಕು
ಎಂದು ಕೇಂದ್ರದ ನೂತನ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತು ್ತ ರಸಗೊಬ್ಬರ ಖಾತೆ ರಾಜ್ಯ ಸಚಿವ
ಭಗವಂತ ಖೂಬಾ ಅವರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಗುರುರಾಜ ಜೋಷಿ ಅವರಿಗೆ
ನಿರ್ದೇಶನ ನೀಡಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸು ್ತವಾರಿ
ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಖರ್ಗೆ ಪೆಟ್ರೋಲ್ ಪಂಪ್‍ನಿಂದ ಹುಮನಾಬಾದ ರಸ್ತೆ ವರೆಗಿನ ಸೇವಾ ರಸ್ತೆಯಲ್ಲಿ ಕೆಲವರು ಕಟ್ಟಿಗೆಗಳನ್ನು ಹಾಕಿ ರಸ್ತೆ ಬಂದ್ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಿ.ಜಿ.ಪಾಟೀಲ ಸಭೆಯ ಗಮನ ಸೆಳೆಯುವಂತೆ ಸಚಿವರು ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ.ಉಮೇಶ ಜಾಧವ ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿರುವ ಕಾರಣ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಕೂಡಲೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಲ ಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, 2023 ರೊಳಗೆ ಇದನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯ ಗ್ರಾಮೀಣ ಭಾಗದ 163894 ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸುವ ಮೂಲಕ ಹಳ್ಳಿಗಳಲ್ಲಿ ಜಲ ಉತ್ಸವಕ್ಕೆ ಕಾರಣರಾಗಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತು ್ತ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಚಿವ ಭಗವಂತ ಖೂಬಾ ನಿರ್ದೇಶನ ನೀಡಿದರು.
2015-16ನೇ ಸಾಲಿನ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಚಿಂಚೋಳಿ ಮತು ್ತ ಆಳಂದ ತಾಲೂಕಿನ ವಿವಿಧ
ಗ್ರಾಮಗಳಲ್ಲಿ 648 ಲಕ್ಷ ರೂ. ಅನುದಾನದಡಿ ಕೈಗೆತ್ತಿಕೊಂಡ 166 ಕಾಮಗಾರಿಗಳಲ್ಲಿ ಇನ್ನೂ 20 ಕಾಮಗಾರಿಗಳು ಇದೂವರೆಗೆ
ಪೂರ್ಣಗೊಳಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಕೂಡಲೆ ಅವುಗಳನ್ನು ಮುಗಿಸುವಂತೆ ಸಮಾಜ ಕಲ್ಯಾಣ
ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಅವರಿಗೆ ನಿರ್ದೇಶನ ನೀಡಿದರು.
ಇದಲ್ಲದೆ ಗ್ರಾಮೀಣ ಭಾಗದಲ್ಲಿ ಪ್ರಾಪರ್ಟಿ ಐ.ಡಿ. ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಯು ಜಿಲ್ಲೆಯಾದ್ಯಂತ
ಅನುಷ್ಠಾನವಾಗಬೇಕು. ಮುದ್ರ ಮತು ್ತ ಸ್ಟಾರ್ಟ್ ಅಪ್ ಯೋಜನೆಯಡಿ ನವೋದ್ಯಮಿಗಳೀಗೆ ಹೆಚ್ಚಿನ ಸಾಲ ನೀಡಬೇಕು ಎಂದು
ಲೀಟ್ ಬ್ಯಾಂಕ್ ಮತು ್ತ ಡಿ.ಐ.ಸಿ. ಅಧಿಕಾರಿಗಳಿಗೆ ಖಡಕ್ ಸೂಚನೆ ನಿಡಿದರು.
ಇತ್ತೀಚೆಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ರಾಜ್ಯದ 1878671 ವಸತಿ ರಹಿತ ಮತು ್ತ
661535 ನಿವೇಶನ ರಹಿತ ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಲು ಅನುಮೋದನೆ ನೀಡಿದ್ದು, ಆ ನಿಟ್ಟಿನಲ್ಲಿ ಸ್ಥಳೀಯ
ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಸೂರಿಲ್ಲದವರಿಗೆ ಸೂರು ಕಲ್ಪಿಸುವತ್ತ ಕಾರ್ಯೋನ್ಮುಖರಾಗಬೇಕು ಎಂದರು.
ಕುಲಾಲಿ ಕೆಳ ಸೇತುವೆ ರಸ್ತೆಗೆ ಸೇವಾ ಮೊತ್ತ ಪಾವತಿಸಿ: ಅಫಜಲಪೂರ ತಾಲೂಕಿನ ಕುಲಾಲಿ ರೈಲ್ವೆ ನಿಲ್ದಾಣದ ಹತ್ತಿರ
ಬರುವ ಎಲ್.ಸಿ.ನಂ-76.77 ರಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯಿಂದ ಡಿ.ಪಿ.ಆರ್
ಸಲ್ಲಿಸಲು ರಾಜ್ಯ ಸರ್ಕಾರವು ನಿಯಮದಂತೆ ಶೇ.2ರಷು ್ಟ ಸೇವಾ ಮೊತ್ತ ಪಾವತಿಸಿದಲ್ಲಿ ರೈಲ್ವೆ ಇಲಾಖೆಯು ಅಂದಾಜು ಪಟ್ಟಿ
ಸಲ್ಲಿಸಲಿದೆ ಎಂದು ಸಚಿವರು ಲೊಕೋಪಯೋಗಿ ಇಲಾಖೆಯ ಇಇ ಮಲ್ಲಿಕಾರ್ಜುನ ಜೇರಟಗಿ ಅವರಿಗೆ ನಿರ್ದೇಶನ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!