ಕರ್ತ್ಯವದ ಭಾವ ಸಮಾಜದಲ್ಲಿ ನಿರ್ಮಾಣವಾಗಲಿ: ನರೇಂದ್ರ

ಹೊಸದಿಗಂತ ವರದಿ,ಕಲಬುರಗಿ:

ಸಮಾಜದ ಕಟ್ಟ ಕಡೆಯ ಮಹಿಳೆಯೂ ಸಹ ನಿಭ೯ಯದಿಂದ ಓಡಾಡುವಂತಹ ವಾತಾವರಣವನ್ನು ಹಿಂದೂ ಸಮಾಜದಲ್ಲಿ ನಿಮಾ೯ಣ ಮಾಡುವ ಮೂಲಕ ನಾವೆಲ್ಲರೂ ನಮ್ಮ ಕತ೯ವ್ಯ ಭಾವವನ್ನು ತೋರಿಸಬೇಕೆಂದು ಆರ್.ಎಸ್.ಎಸ್.ಕನಾ೯ಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕ ನರೇಂದ್ರ ಜೀ ತಿಳಿಸಿದರು.

ಶುಕ್ರವಾರ ನಗರದ ಯಶ್ ಕೋಠಾರಿ ಭವನ ಸಮೀಪ ಮಹಾವೀರ ನಗರದಲ್ಲಿ ಶ್ರೀ ನಿರಾಜಿ ಬುವಾ ವಿಶ್ವಸ್ಥ ನಿಧಿ ಜಾಜನ ಮುಗಳಿ ಅಡಿಯಲ್ಲಿ ಮಾತೃಶಕ್ತಿ ಸ್ವಾವಲಂಬಿ ಕೇಂದ್ರದ ಉದ್ಗಾಟನಾ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.

ಸಾಮಾನ್ಯ ಪುರುಷರು ಅನುಭವಿಸುವ ನೋವಿಗಿಂತ 18 ಪಟ್ಟು ಅಧಿಕ ನೋವು ತಾಯಿ ಸ್ವರೂಪಿಯಳಾದ ಮಾತೇ ಅನುಭವಿಸುತ್ತಾಳೆ.ತಾಯಿ ಶಬ್ದ ಅತ್ಯಂತ ಉನ್ನತವಾದ ಸ್ಥಾನವಾಗಿದ್ದು,ಹೀಗಾಗಿ ನಮ್ಮ ಮಾತೃಶಕ್ತಿಯನ್ನು ಸ್ವಾವಲಂಬಿಯಾಗಿ ಮಾಡಬೇಕು ಎಂದರು. ಮಾತೃಶಕ್ತಿಯ ಎದುರಿಗೆ ಪುರುಷ ಶಕ್ತಿ ಸಮಾನವಾಗಲು ಸಾಧ್ಯವಿಲ್ಲ. ಏಕ ಕಾಲದಲ್ಲಿ ಅನೇಕ ಕಾಯ೯ಗಳನ್ನು ಮಾಡುವ ಶಕ್ತಿ ಮಾತೃಶಕ್ತಿಗೆ ಮಾತ್ರವಿದೆ ಎಂದರು.

ನಮ್ಮ ಸಮಾಜದ ಶ್ರದ್ಧೆಯ ಕೇಂದ್ರ, ನಮಗೆ ಪೂಜನೀಯ ವಾಗಿರುವ ಮಹಿಳೆಯೂ ಜೀವನದಲ್ಲಿ ಸಂತೋಷದಿಂದ ನಗು ನಗುತಾ ಇರುವ ಉದ್ದೇಶದಿಂದ ಮಾತೃಶಕ್ತಿ ಸ್ವಾವಲಂಬಿ ಕೇಂದ್ರ ಹಿಂದೂ ಸಮಾಜದ ಎಲ್ಲಾ ಮನೆಗಳಿಗೆ ಬೆಳಕು ನೀಡುವ ಕೆಲಸ ಮಾಡಲಿದೆ ಎಂದು ಹೇಳಿದ ಅವರು,ಸಮಾಜದ ಸಹಕಾರ ಮುಖ್ಯವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!