Monday, March 27, 2023

Latest Posts

ಯುವಕರು ಸೇವಾ ಮನೋಭಾವ ಮೆರೆಯಲಿ: ಹೊಸಮಲಿ ಷಣ್ಮುಖಪ್ಪ

ಹೊಸದಿಗಂತ ವರದಿ, ಗಂಗಾವತಿ:

ಎಲ್ಲ ವರ್ಗದ ಜನರು ಶಿಕ್ಷಣವಂತರಾಗಬೇಕು. ಯುವಕರು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಸಂತೋಷ ಕುಮಾರ್ ನಾಯಕ ನೇತೃತ್ವದ ತಂಡ ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಹೊಸಮಲಿ ಷಣ್ಮುಖಪ್ಪ ನಾಯಕ ಹೇಳಿದರು.
ನಗರದ 9ನೇ ವಾರ್ಡಿನ ಉಪ್ಪನಮಾಳಿ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಯುವಸೇನಾ ಹಾಗೂ ಸಂತೋಷ ಕುಮಾರ ನಾಯಕ ಹೊಸಮಲಿ ಅಭಿಮಾನಿ ಬಳಗದ ಆಶ್ರಯದಲ್ಲಿ ಆಯೋಜಿಸಲಾದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ನು ಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಜನತೆ ದೇಶದ ಶಕ್ತಿ. ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದರೆ ಎಲ್ಲ ಕ್ಷೇತ್ರ ಅಭಿವೃದ್ಧಿ ಆದಂತೆ. ಸರ್ಕಾರಿ ಶಾಲಾ ಮಕ್ಕಳು ಹಾಗೂ ಶಾಲೆ ಅಭಿವೃದ್ಧಿಗೆ ಸರ್ಕಾರದ ಜತೆಗೆ ಯುವಜನತೆ ಕೈಜೋಡಿಸಬೇಕು. ಇಂದು ಯುವಕರ ತಂಡ ಕೈಲಾದ ಸಹಾಯ ಮಾಡಲು ಮುಂದಾಗಿದ್ದು, ಎಲ್ಲರ ಸಹಕಾರ ಅವಶ್ಯವಾಗಿದೆ ಎಂದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶಿವಕುಮಾರ ಅರಿಕೇರಿ ಮಾತನಾಡಿ, ಯುವ ಸಮುದಾಯವು ಸೇವಾ ಮನೋಭಾವನೆಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ಹಣ ಎಲ್ಲರಲ್ಲಿ ಇರುತ್ತದೆ. ಸಮಾಜಕ್ಕಾಗಿ ಕೊಡುವ ಮನಸ್ಸು ಇರಬೇಕು. ಆಗ ಮಾತ್ರ ನಾವು ಗಳಿಸಿದ ಹಣಕ್ಕೆ ಬೆಲೆ ಬರುತ್ತದೆ. ಹಣ ಯಾವಾಗಲೂ ಸಮಾಜೋಪಾಯಕ್ಕೆ ವಿನಿಯೋಗವಾಗಬೇಕು. ಇಂತಹ ಕಲ್ಪನೆಯೊಂದಿಗೆ ಸಂಘಟನೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಬಹುತೇಕ ಮಕ್ಕಳು ಬಡವರು, ಕೂಲಿಕಾರ್ಮಿಕರ ಮಕ್ಕಳು ಶಿಕ್ಷಣ ಕಲಿಯುತ್ತಿದ್ದು, ಸರಿಯಾದ ಮೂಲ ಕಲಿಕಾ ಸಾಮಾಗ್ರಿಗಳ ಕೊರತೆಯಿದೆ. ಇದನ್ನು ಗಮನಿಸಿ ಪೆನ್ನು ನೋಟ್ ಪುಸ್ತಕಗಳನ್ನು ನೀಡುತ್ತಿರುವುದು ಶ್ಲಾಘನೀಯ ವಾಗಿದೆ ಎಂದರು.
ಈ ವೇಳೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶೋಭಾ ಪ್ರಕಾಶ ಜಂತ್ಲಿ, ಚನ್ನಮ್ಮ ನಿರುಪಾದಿ, ಸಮಾಜ ಸೇವಕ ಸಂತೋಷ ಕುಮಾರ ನಾಯಕ ಹೊಸಮಲಿ, ಮುಖ್ಯೋಧ್ಯಾಯಿನಿ ವೆಂಕಟಲಕ್ಷ್ಮೀ ಬೆಲ್ಲದ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶರಣೇಗೌಡ, ವಿವೇಕಾನಂದ ಯುವಸೇನಾ ಸಂಘದ ಅಧ್ಯಕ್ಷ ಶರಣಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮದನ್ ಕುಮಾರ ಈಡೀಗ, ರಮೇಶ ಕರಡಿ, ಯಮನೂರ ಜೋಗೇರ್ , ಪವನ ಕುಮಾರ, ಸುನೀಲ್ ಸಂತೆ ಬಯಲು, ಶಿಕ್ಷಕಿ ನೀಲಮ್ಮ ಹಿರೇಮಠ, ಅನು ಶಿಲ್ಪಿ ಸೇರಿದಂತೆ ಇನ್ನಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!