Wednesday, November 30, 2022

Latest Posts

ನನ್ನ ಮತ ಮಾರಾಟಕ್ಕಿಲ್ಲ ಎಂಬ ಆಂದೋಲನ ನಡೆಯಲಿ: ಸ್ಪೀಕರ್ ಕಾಗೇರಿ

ಹೊಸದಿಗಂತ ವರದಿ, ಶಿವಮೊಗ್ಗ:

ಪ್ರತಿ ಮತದಾರನೂ ನನ್ನ ಮತ ಮಾರಾಟಕ್ಕಿಲ್ಲ ಎಂಬ ಆಂದೋಲನ ಮಾಡಬೇಕು ಎಂದು ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಬು‘ವಾರ ಆಯೋಜಿಸಲಾಗಿದ್ದ ಚುನಾವಣಾ ಸುಧಾರಣಾ ಕ್ರಮಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಪ್ರತಿ ವ್ಯವಸ್ಥೆಯೂ ಅದಃಪತನ ಕಾಣುತ್ತಿದೆ. ಇದನ್ನು ಈ ಹಂತದಲ್ಲೂ ತಡೆಯದೇ ಹೋದರೆ ದೇಶದಲ್ಲಿ ಅರಾಜಕತೆ ಸೃಷ್ಟಿ ಆಗುತ್ತದೆ. ಹಾಗಾಗಿ ಸಮಾಜದಲ್ಲಿನ ಯುವಕರು ಕಾವಲುಗಾರ ಆಗಬೇಕು. ಜಾತಿ, ಹಣ, ತೋಳ್ಬಲ ಸೇರಿದಂತೆ ಯಾವದೇ ಕಾರಣಕ್ಕೂ ನನ್ನ ಮತ ಮಾರಾಟಕ್ಕಿಲ್ಲ ಎಂಬ ಸಂಕಲ್ಪ ಮಾಡಬೇಕು. ಇದೊಂದು ಸವಾಲಿನ ವಿಷಯವಾಗಿದೆ ಎಂದರು.
ಬಂಗಾರದ ತಟ್ಟೆಯಲ್ಲಿ ಬರಲಿಲ್ಲ…
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತ್ಯಾಗ, ಬಲಿದಾನಗಳಿಂದಾಗಿ ಬಂದಿದೆ. ಭಾರತೀಯರ ಹೋರಾಟದಿಂದಾಗಿ ಬ್ರಿಟೀಷರು ದೇಶ ಬಿಟ್ಟು ತೊಲಗುವುದು ಅನಿವಾರ್ಯ ಆಗಿತ್ತು.. ಅದಕ್ಕಾಗಿ ಹೋರಾಟ ಮಾಡಿದ ಹಿರಿಯರನ್ನುಘಿ, ಅವರ ತ್ಯಾಗ-ಬಲಿದಾನವನ್ನು ಸ್ಮರಿಸಬೇಕು. ಸ್ವಾತಂತ್ರ್ಯವನ್ನು ಬ್ರಿಟೀಷರು ನಮಗೆ ಬಂಗಾರದ ತಟ್ಟೆಯಲ್ಲಿ ಇಟ್ಟುಕೊಟ್ಟಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ರಾಜಕಾರಣ ಮಾತ್ರ ಕುಸಿದಿಲ್ಲ…
ಮಾಧ್ಯಮಗಳಲ್ಲಿ ಪ್ರತಿನಿತ್ಯ ರಾಜಕಾರಣಿಗಳನ್ನು ಹೆಚ್ಚಾಗಿ ಬಿಂಬಿಸಲಾಗುತ್ತಿದೆ. ಇದೊಂದು ರಂಜನೆ ಆಗಿದೆ. ಇದು ಮಾಧ್ಯಮ ದ ಕೊಡುಗೆ. ಆದರೆ ರಾಜಕೀಯ ಕ್ಷೇತ್ರ ಮಾತ್ರವೇ ಕಲುಷಿತ ಆಗಿಲ್ಲ. ಶಾಸಕಾಂಗದ ಜೊತೆಗೆ ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಕೂಡ ಕಲುಷಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್‌ಕುಮಾರ್, ಕುವೆಂಪು ವಿವಿ ಕುಲಸಚಿವೆ ಜಿ.ಅನುರಾ‘, ಎಡಿಸಿ ನಾಗೇಂದ್ರ ಹೊನ್ನಳ್ಳಿ, ಜಿಪಂ ಸಿಇಒ ಪ್ರಕಾಶ್, ಪಾಲಿಕೆ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯ್ಕ, ಆಯುಕ್ತ ಮಾಯಣ್ಣ ಗೌಡ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!