ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನುಮುಂದೆ ದೇಶವನ್ನು `ಇಂಡಿಯಾ ಎಂದು ಕರೆಯದೆ ‘ಭಾರತ’ ಎಂದೇ ಅಧಿಕೃತವಾಗಿ ಕರೆಯಬೇಕು ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ನಮ್ಮ ದೇಶದ ಹೆಸರು ಭಾರತ. ಹೀಗಾಗಿ `ಭಾರತ ಎಂದು ಕರೆಯಿರಿ. ಇಂಡಿಯಾ ಎಂಬುದು ಇಂಗ್ಲೀಷ್ ಹೆಸರು. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಎಂದು ಒತ್ತಾಯಿಸಿದರು.
ರಾಷ್ಟ್ರಪತಿ ಭವನ ಮತ್ತು ಜಿ-20 ಗಾಗಿ ಪ್ರಧಾನ ಮಂತ್ರಿಯವರ ಆಹ್ವಾನ ಪತ್ರಿಕೆಯನ್ನು ‘ಭಾರತ ಗಣರಾಜ್ಯ’ ಎಂದು ಮುದ್ರಿಸಿರುವುದನ್ನು ಶ್ಲಾಘಿಸಿದ ಅವರು, ಜನರು ಭಾರತವನ್ನು ‘ಭಾರತ’ ಎಂದು ಮಾತ್ರ ಕರೆಯುವಂತೆ ಒತ್ತಾಯಿಸಿದರು.
ಭಾರತದ ಸಂವಿಧಾನವನ್ನು ಹಿಂದಿಯಲ್ಲಿ ಭಾರತ್ ಕಾ ಸಂವಿದಾನ್ ಎಂದು ಬರೆಯಲಾಗಿದೆ. ಅದೇ ರೀತಿ ರಿಸರ್ವ್ ಬ್ಯಾಂಕ್ ಇಂಡಿಯಾ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಕರೆಯಲಾಗುತ್ತದೆ. ನಾವು ಏಕೆ ಇದನ್ನು ಮಾಡಬೇಕು? ಈ ಕುರಿತು ಯೋಚಿಸಬೇಕು ಮತ್ತು ಅದನ್ನು ಸರಿಪಡಿಸಬೇಕು ಎಂದರು.