ಬಾಂಗ್ಲಾದಲ್ಲಿ ಮತ್ತೆ ಪ್ರಧಾನಿಯಾಗಿ ಶೇಕ್ ಹಸೀನಾ?: ಸ್ಫೋಟಕ ಹೇಳಿಕೆ ನೀಡಿದ ಅವಾಮಿ ಲೀಗ್ ಪಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಂಗ್ಲಾದಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ಸರ್ಕಾರದ ಉರುಳಿದ ಬಳಿಕ ಮೊಹಮ್ಮದ್ ಯೂನಸ್ ಅಧಿಕಾರ ನಡೆಸುತ್ತಿದ್ದಾರೆ. ಇತ್ತ ಶೇಕ್ ಹಸೀನಾ ಭಾರತಕ್ಕೆಪಲಾಯನ ಆಗಿದ್ದಾರೆ .

ಇದರ ನಡುವೆ ಬಾಂಗ್ಲಾದೇಶದಲ್ಲಿ ಮತ್ತೊಂದು ಕ್ಷಿಪ್ರ ಕ್ರಾಂತಿಯಾಗುವ ಸಾಧ್ಯತೆ ಕಾಣಿಸುತ್ತಿದೆ. ಅವಾಮಿ ಲೀಗ್ ಪಕ್ಷ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.

ಶೇಕ್ ಹಸೀನಾ ಮತ್ತೆ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ. ಶೇಕ್ ಹಸೀನಾ ಅವರನ್ನು ಸುರಕ್ಷಿತವಾಗಿ ನೋಡಿಕೊಂಡ ಭಾರತಕ್ಕೆ ಅವಾಮಿ ಲೀಗ್ ಧನ್ಯವಾದ ಹೇಳಿದೆ.

ಹೌದು, ಅವಾಮಿ ಲೀಗ್ ಬಾಂಗ್ಲಾದೇಶ ಪಕ್ಷದ ಹಿರಿಯ ಮುಖಂಡ ರಬ್ಬಿ ಅಲಾಮ್ ಹೇಳಿಕೆ ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ರಬ್ಬಿ ಅಲಾಮ್ ಅವಾಮಿ ಲೀಗ್ ಪಕ್ಷದ ಪ್ರಮುಖ ನಾಯಕ, ಶೇಕ್ ಹಸೀನಾ ಅವರ ಆಪ್ತ.

ಬಾಂಗ್ಲಾದೇಶದಲ್ಲಿ ಯುವ ಸಮೂಹ ಅತೀ ದೊಡ್ಡ ತಪ್ಪು ಮಾಡಿದೆ. ಆದರೆ ಇದು ಅವರ ತಪ್ಪಲ್ಲ, ಯುವ ಸಮೂಹದ ದಾರಿ ತಪ್ಪಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಚುನಾಯಿತ ಸರ್ಕಾರವನ್ನು ಬುಡ ಮೇಲು ಮಾಡಿದೆ ಎಂದರೆ ಇದರ ಹಿಂದಿನ ಶಕ್ತಿಯನ್ನು ಊಹಿಸಲು ಹೆಚ್ಚುು ಹೊತ್ತು ಬೇಕಾಗಿಲ್ಲ ಎಂದು ರಬ್ಬಿ ಅಲಾಮ್ ಹೇಳಿದ್ದಾರೆ.

ಆಡಳಿತ ಬದಲಾವಣೆ ಚುನಾವಣೆಯಲ್ಲಿ ಸಹಜ. ಶೇಕ್ ಹಸೀನಾ ಸರ್ಕಾರದ ಆಡಳಿತ ಸರಿ ಇಲ್ಲದಿದ್ದರೆ ಜನರೇ ಸೋಲಿಸುತ್ತಾರೆ. ಆದರೆ ಇಲ್ಲಿ ಆಗಿದ್ದು ಹಾಗಲ್ಲ, ಚುನಾಯಿತಿ ಸರ್ಕಾರವನ್ನು ಬುಡಮೇಲು ಮಾಡಲು ವ್ಯವಸ್ಥಿತಿ ಯೋಜನೆ ನಡೆದಿತ್ತು.ಆ ಕ್ಷಣ ತುರ್ತುಶೇಕ್ ಹಸೀನಾ ಜೀವ ಉಳಿಯುವುದೇ ಅನುಮಾನವಾಗಿತ್ತು. ಆದರೆ ಭಾರತ ಈ ವೇಳೆ ನೆರವು ನೀಡಿತು. ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿತು. ಇಷ್ಟೇ ಅಲ್ಲ ಶೇಕ್ ಹಸೀನಾಗೆ ಭದ್ರತೆಯನ್ನು ಒದಗಿಸಿತು. ಹಲವು ನಾಯಕರು ಭಾರತದಲ್ಲಿ ಆಶ್ರಯ ಪಡೆದರು ಎಂದು ರಬ್ಬಿ ಅಲಾಮ್ ಹೇಳಿದ್ದಾರೆ.

ಆದರೆ ಸಮಯ ಬಂದಿದೆ. ಮೊಹಮ್ಮದ್ ಯೂಸುಫ್ ಶೀಘ್ರದಲ್ಲೇ ರಾಜೀನಾಮೆ ನೀಡಬೇಕು. ಕಾರಣ ಶೇಕ್ ಹಸೀನಾ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ ಎಂದು ರಬ್ಬಿ ಅಲಾಮ್ ಹೇಳಿದ್ದಾರೆ. ಬಾಂಗ್ಲಾದೇಶ ಇದೇ ರೀತಿ ಮುಂದುವರಿದರೆ ನಿರ್ಮಾವಾಗಲಿದೆ. ಬಾಂಗ್ಲಾದೇಶ ಅಸ್ತಿತ್ವವೇ ಇರುವುದಿಲ್ಲ ಎಂದು ರಬ್ಬಿ ಅಲಾಮ್ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!