ಪ್ರಧಾನಿ ಮೋದಿ ಕುರಿತು ಹಗುರವಾಗಿ ಮಾತನಾಡುವವರಿಗೆ ಕಪಾಳಕ್ಕೆ ಹೊಡೆದಂತ ಉತ್ತರ ನೀಡೋಣ: ಶಾಸಕ ಜನಾರ್ಧನ ರೆಡ್ಡಿ

ಹೊಸದಿಗಂತ ವರದಿ,ರಾಯಚೂರು :

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ ಅವರಿಗೆ ಮತ ಹಾಕಿದರೆ ಅದು ಕಸದ ಬುಟ್ಟಿಗೆ ಹಾಕಿದಂತೆ. ದೇಶಕ್ಕಾಗಿ ಮತ ಹಾಕುವುದಾದರೆ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಅವರಿಗೆ ಹಾಕಿ. ಪ್ರಧಾನಿ ಮೋದಿ ಕುರಿತು ಹಗುರವಾಗಿ ಮಾತನಾಡುವವರಿಗೆ ಕಪಾಳ ಮೋಕ್ಷ ಮಾಡಿದಂತೆ ಮತದಾರರು ಉತ್ತರ ನೀಡಬೇಕು ಎಂದು ಶಾಸಕ ಜಿ.ಜನಾರ್ಧನರೆಡ್ಡಿ ಹೇಳಿದರು.

ಗುರುವಾರ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರ ನಾಮಪತ್ರ ಸಲ್ಲಿಸುವ ಮುನ್ನ ಅತ್ತನೂರು ಸಭಾಂಗಣದಲ್ಲಿ ಜರುಗಿದ ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಮಾತನಾಡಿ, ಇದು ದೇಶದ ಅಭಿವೃದ್ದಿಗೆ, ಭದ್ರತೆಗಾಗಿ ನಡೆಯುವ ಚುನಾವಣೆಯಾಗಿದ್ದು ೧೪೦ ಕೋಟಿ ಜನ ಮೋದಿ ಅವರಿಗೆ ಮತ್ತೊಮ್ಮೆ ಆಶೀರ್ವಾದಿಸಲಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಚಿವ ಶಿವರಾಜ ತಂಗಡಗಿ ಕಪಾಳಕ್ಕೆ ಹೊಡೆಯಿರಿ ಎಂದು ಹೇಳುತ್ತಿದ್ದಾರೆ ಈ ಚುನಾವಣೆಯಲ್ಲಿ ಸಜ್ಜನ, ಬಿದ್ದಿವಂತ ರಾಜಕಾರಣಿಯಾದ ರಾಜಾ ಅಮರೇಶ್ವರ ನಾಯಕರ ಗೆಲ್ಲಿಸುವ ಮೂಲಕ ಕಾಂಗ್ರೆಸ್‌ನವರಿಗೆ ಕಪಾಳಕ್ಕೆ ಹೊಡೆದಂತ ಉತ್ತರ ನೀಡೋಣ ಎಂದರು.

ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ಅಧಿವೇಶನದಲ್ಲಿ ದಿಟ್ಟತನದಿಂದ ಮಾತನಾಡಿದ್ದು ಅದಕ್ಕೆ ಬಲ ಬರಬೇಕಾದರೆ ಬಿಜೆಪಿ ಅಭ್ಯರ್ಥಿ ಗೆದ್ದರೆ ರಾಯಚೂರಿಗೆ ಏಮ್ಸ್, ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಪ್ರಧಾನಿಯವರ ಕರೆತರುವ ಕೆಲಸಕ್ಕೆ ಬಲ ಸಿಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್‌ನ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚಿಸಿ ಈ ಬಾರಿ ೨ ಲಕ್ಷಕ್ಕೂ ಅಧಿಕ ಮತಗಳ ಅಂತರದಿoದ ಗೆಲ್ಲಿಸಲು ಶ್ರಮ ವಹಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಛಲವಾದಿ ಮಾತನಾಡಿ, ವೇದಿಕೆ ಮೇಲೆ ಕುಳಿತುಕೊಳ್ಳುವವರು ಬಿಜೆಪಿ ನಾಯಕರಷ್ಟೆ ಆದರೆ ಪಕ್ಷದ ನಿಜವಾದ ಮಾಲೀಕರು ಮುಂಭಾಗದಲ್ಲಿ ಕುಳಿತು ಪಕ್ಷಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ರಾಜಾ ಅಮರೇಶ್ವರ ನಾಯಕರ ಗೆಲ್ಲಿಸಿಕೊಡುವಂತೆ ತಮ್ಮ ಕಾಲಿಗೆ ಬಿದ್ದು ಕೇಳುವೆ. ಎಲ್ಲರೂ ಬಿಜೆಪಿಗೆ ಮತ ಕೊಡುವಂತೆ ಜನರ ಬಳಿಗೆ ತೆರಳೋಣ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಮಾರನಾಯಕ ಓಪೆಕ್ ಆಸ್ಪತ್ರೆ ಮುಚ್ಚಿಸಿದ ಕೀರ್ತಿ ಅವರದ್ದಾಗಿದೆ. ಜಿಲ್ಲೆಗೆ ಅವರ ಕೊಡುಗೆ ಶೂನ್ಯವಾಗಿದೆ ಅಂತಹ ವ್ಯಕ್ತಿಗೆ ಜನ ಮತ ನೀಡಬಾರದೆಂದು ಕೋರಿದರು.

ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ನೇಮಿರಾಜ ನಾಯ್ಕ, ಮಾಜಿ ಶಾಸಕರಾದ ಪಾಪಾರೆಡ್ಡಿ, ತಿಪ್ಪರಾಜು ಹವಾಲ್ದಾರ, ರಾಜಾ ವೆಂಕಟಪ್ಪ ನಾಯಕ, ಮುಖಂಡರಾದ ಮಹಾಂತೇಶ ಪಾಟೀಲ, ಜೆ.ಶರಣಪ್ಪಗೌಡ, ಕೆಎಂ ಪಾಟೀಲ, ಎನ್.ಶಿವಶಂಕರ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!