ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡೋಣ: ಎಂ.ಸಿ.ರಘುಚಂದನ್

ಹೊಸದಿಗಂತ, ಚಿತ್ರದುರ್ಗ:

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಲಿ ಗೆಲುವಿಗೆ ಶ್ರಮಿಸಿ ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂ.ಸಿ.ರಘುಚಂದನ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ನಾಯಕನಹಟ್ಟಿ ಹಾಗೂ ಮೊಳಕಾಲ್ಮುರು ಮಂಡಲಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೇ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ಕೇಳಿದ್ದೆ. ಆದರೆ ಹೈಕಮಾಂಡ್ ಮುಂದಿನ ಸಾರಿ ನೀಡುವುದಾಗಿ ಹೇಳಿದ್ದು, ಅದರಂತೆ ನಾಯಕರ ಮಾತಿಗೆ ತಲೆಬಾಗಿ ಅಂದಿನಿಂದ ಇಂದಿನವರೆಗೂ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ವರಿಷ್ಠರು ನನಗೆ ನೀಡಲಿ ಇಲ್ಲ. ಬೇರೆಯವರಿಗೆ ಸ್ಪರ್ಧಿಸಲು ಟಿಕೇಟ್ ನೀಡಲಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹಾಗಾಗಿ ಪಕ್ಷವನ್ನು ಈಗಿನಿಂದಲೇ ಗಟ್ಟಿಗೊಳಿಸಬೇಕಿದೆ. ನಿಮಗೆ ಏನೇ ಸಮಸ್ಯೆಗಳಾದರೂ ಮಧ್ಯರಾತ್ರಿಯಲ್ಲಿ ಫೋನ್ ಮಾಡಿ ಸ್ಪಂದಿಸುತ್ತೇನೆ. ಕಾರ್ಯಕರ್ತರ ನೋವು ನನ್ನ ನೋವೆಂದು ಭಾವಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸಿ ಭಾರತೀಯರ ಐದು ನೂರು ವರ್ಷಗಳ ಕನಸನ್ನು ನನಸುಗೊಳಿಸಿ ಭಾವನೆಗಳನ್ನು ಎತ್ತಿ ಹಿಡಿದಿದ್ದಾರೆ. ಆರ್ಥಿಕ ವಹಿವಾಟಿನಲ್ಲಿ ಭಾರತ ಈಗ ಐದನೇ ಸ್ಥಾನದಲ್ಲಿರುವುದರಿಂದ ನರೇಂದ್ರ ಮೋದಿಯವರ ಕೈಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.

ನಾಯಕನಹಟ್ಟಿ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ನೇರಲಹಳ್ಳಿ, ತುಮಕೂರ‍್ಲಹಳ್ಳಿ, ರಾಯಾಪುರ, ಮೊಳಕಾಲ್ಮುರು, ಹಾನಗಲ್, ನುಂಕೆಮಲೆ, ಹಿರೇಹಳ್ಳಿ, ಚಿಕ್ಕೇರಹಳ್ಳಿ, ನಾಗಸಮುದ್ರ, ಸಿದ್ದಾಪುರ, ದೇವಸಮುದ್ರ, ರಾಂಪುರ, ಗೌರಸಮುದ್ರ, ಉಳ್ಳಾರ್ತಿ ಗ್ರಾಮಗಳಿಗೆ ಎಂ.ಸಿ.ರಘುಚಂದನ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಹೇಶಣ್ಣ, ಶಿವಣ್ಣ, ನಾಗರಾಜ್, ರಾಮಣ್ಣ, ಪ್ರಭು, ಮಾಜಿ ಸಚಿವ ತಿಪ್ಪೇಸ್ವಾಮಿ ಇನ್ನು ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!