ರಾಜ್ಯದ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ: ಏಳು ಜನರಿಗೆ ಪತ್ರ ಬರೆದಿದ್ದು ಒಬ್ಬನೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಲೇಖಕರು ಹಾಗೂ ಚಿಂತಕರಿಗೆ ಕೊಲೆ ಬೆದರಿಕೆ ಬಂದಿದ್ದ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಸಿಸಿಬಿ ಅಧಿಕಾರಿಗಳು ನೀಡಿದ್ದಾರೆ.

ಕರ್ನಾಟಕದ ಏಳು ಚಿಂತಕರಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದು ಒಬ್ಬನೇ! ಹೌದು, ದಾವಣಗೆರೆ ಮೂಲದ ವ್ಯಕ್ತಿ ಏಳು ಜನರಿಗೂ ಪತ್ರ ಬರೆದು, ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಗೆ ಹೋಗಿ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ಸಿಸಿಬಿ ಪೊಲೀಸರು ಆರೋಪಿ ಹುಡುಕಾಟ ಚುರುಕುಗೊಳಿಸಿದ್ದಾರೆ. ಒಟ್ಟಾರೆ 15 ಕ್ಕೂ ಹೆಚ್ಚು ಚಿಂತಕರಿಗೆ ಬೆದರಿಕೆ ಪತ್ರ ತಲುಪಿದೆ. ಇದರಿಂದಾಗಿ ಆತಂಕ ಹೆಚ್ಚಾಗಿದ್ದು, ಯಾವ ಕ್ಷಣದಲ್ಲಿ, ಯಾವ ರೂಪದಲ್ಲಾದರೂ ದಾಳಿ ಮಾಡಬಹುದು ಎನ್ನುವ ಮಾನಸಿಕ ಭಯ ಎದುರಿಸುತ್ತಿದ್ದಾರೆ. ಪ್ರೊ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಯನ್ನು ನೆನಪಿಸಿಕೊಂಡು ಆತಂಕಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!