HEALTH | ನಾನ್‌ಸ್ಟಿಕ್ ಪಾತ್ರೆಗಳನ್ನು ಸರಿಯಾಗಿ ಬಳಸದಿದ್ರೆ ಅನಾರೋಗ್ಯ ಖಚಿತ, ಹೇಗೆ ಬಳಸೋದು ನೋಡಿ..

ಮನೆಯಲ್ಲಿ ನಾನ್‌ಸ್ಟಿಕ್ ತವಾ ಅಥವಾ ಪಾತ್ರೆಯಲ್ಲಿ ಬಳಸ್ತೀರಾ? ಹಾಗಿದ್ರೆ ಈ ಬಗ್ಗೆ ನೀವು ತಿಳಿಯಲೇಬೇಕು. ಈ ಹಿಂದೆ ನಾನ್‌ಸ್ಟಿಕ್ ಬಳಸಿದರೆ ಕ್ಯಾನ್ಸರ್ ಸಾಧ್ಯತೆ ಇದೆ ಎನ್ನಲಾಗಿತ್ತು. ಇದು ನಿಜವಾ? ಸಂಪೂರ್ಣ ಮಾಹಿತಿ ಇಲ್ಲಿದೆ..

ನಾನ್‌ಸ್ಟಿಕ್ ತವಾದಿಂದ ಕ್ಯಾನ್ಸರ್ ಬರುತ್ತದಾ?
ಈ ಹಿಂದೆ ಅಂದರೆ 2013ಕ್ಕೂ ಮುನ್ನ ಈ ಮಾತು ಚಾಲ್ತಿಯಲ್ಲಿತ್ತು. ಆದರೆ 2013 ರ ನಂತರ ಮ್ಯಾನ್ಯುಫಾಕ್ಚರ್ ಆಗುತ್ತಿರುವ ನಾನ್‌ಸ್ಟಿಕ್ ಪಾತ್ರೆಗಳು ದಿನಬಳಕೆ ಅಡುಗೆಗೆ ಸೇಫ್ ಆಗಿವೆ.

ನಾನ್‌ಸ್ಟಿಕ್ ಬಳಸೋದು ಹೇಗೆ?
ಒಂದು ಪಾತ್ರೆ ಅಥವಾ ತವಾದ ಜೀವಿತಾವಧಿ ಐದು ವರ್ಷ, ಐದು ವರ್ಷದ ನಂತರವೂ ಪಾತ್ರೆ ಚೆನ್ನಾಗಿಯೇ ಇರುತ್ತದೆ. ಆದರೂ ಅದನ್ನು ಬಳಸಬೇಡಿ.
ಇನ್ನು ಮರದಿಂದ ಮಾಡಿದ ಕೋಲುಗಳನ್ನು ಮಾತ್ರ ಪಾತ್ರೆಗೆ ಬಳಸಿ, ಸ್ಟೀಲ್‌ದ್ದು ಬೇಡ.
ಪಾತ್ರೆಗಳ ಮೇಲೆ ಬೇರೆ ಪಾತ್ರೆ ಹಾಕುವುದು, ಸ್ಕ್ರಾಚ್ ಮಾಡುವುದು, ರಫ್ ಆದ ಬ್ರಶ್‌ನಿಂದ ಉಜ್ಜಬೇಡಿ.

ಗೀರು ಬಿದ್ದ ನಾನ್‌ಸ್ಟಿಕ್ ಪಾತ್ರೆ ಬಳಸಬಹುದಾ?
ಮುಂಚೆ ಟೆಫ್ಲಾನ್ ಪ್ಯಾನ್‌ಗಳಿಗೆ ಪೆರ್‌ಫ್ಲೂರೊಕ್ಟೊನಿಕ್ ಆಸಿಡ್ ಕೋಟಿಂಗ್ ಮಾಡಲಾಗುತ್ತಿತ್ತು. ಆದರೆ ಈಗ ಈ ಕೋಟಿಂಗ್ ಮಾಡುವುದಿಲ್ಲ. ಈ ಕೋಟಿಂಗ್‌ನಿಂದ ರಿಲೀಸ್ ಆಗುವ ಕೆಮಿಕಲ್ಸ್‌ನಿಂದ ಕ್ಯಾನ್ಸರ್ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಸ್ಟೀಲ್ ಕೈ ಬಳಸಿ ಹೆಚ್ಚು ಸ್ಕ್ರಾಚ್ ಆಗಿದ್ದರೆ ಪಾತ್ರೆಯನ್ನು ಬಳಸಬೇಡಿ, ಇನ್ನು ಅತಿಯಾದ ಉರಿಯಲ್ಲಿ ಬಳಸಿದರೆ ಅನಾರೋಗ್ಯ ಖಂಡಿತ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!