ಮತ್ತೆ ಪುಟಿದೆದ್ದಿದೆ ದಾಖಲೆ ಪ್ರಮಾಣಕ್ಕೆ ಕುಸಿದಿದ್ದ ಎಲ್ ಐ ಸಿ ಷೇರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಷೇರು ಪೇಟೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಗುರುವಾರದ ಮಾರುಕಟ್ಟೆಯಲ್ಲಿ ಮತ್ತೆ ಪುಟಿದೆದ್ದಿದೆ. ಎಲ್‌ಐಸಿ ಷೇರುಗಳು ಈ ಹಿಂದೆ ಫೆ.27ರಂದು ಎನ್‌ಎಸ್‌ಇ ಯಲ್ಲಿ 566 ರೂಪಾಯಿಗಳಿಗೆ ಕುಸಿಯುವ ಮೂಲಕ ಅತ್ಯಂತ ಕನಿಷ್ಟ ಪ್ರಮಾಣವನ್ನು ದಾಖಲಿಸಿತ್ತು.

ಗುರುವಾರ ಮಾರುಕಟ್ಟೆ ತೆರೆದ ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಮೌಲ್ಯದಲ್ಲಿ ವಹಿವಾಟು ಆರಂಭಿಸಿದ ಎಲ್‌ಐಸಿ ಷೇರುಗಳು ಇಂಟ್ರಾಡೇ ಗರಿಷ್ಠ ಮಟ್ಟ 605.45 ರೂ.ಗಳಿಗೆ ತಲುಪಿವೆ. ಆ ಮೂಲಕ ಕಳೆದ ಮೂರು ಅವಧಿಗಳಲ್ಲಿ ಎಲ್‌ಐಸಿ ಷೇರುಗಳು 7 ಶೇಕಡಾ ಏರಿಕೆಯನ್ನು ದಾಖಲಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!