ಎಲ್ ಐ ಸಿಯಲ್ಲಿ ಕೇಳೋರಿಲ್ಲದೇ ಬಿದ್ದಿದೆ 21 ಸಾವಿರ ಕೋಟಿ ರುಪಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಎಲ್‌ಐಸಿಯಲ್ಲಿ ಕ್ಲೈಮ್ ಮಾಡದ ರುಪಾಯಿ 21,500 ಕೋಟಿಗೂ ಹೆಚ್ಚು ನಿಧಿ ಇದೆ.

ಹೌದು, ಮಾರುಕಟ್ಟೆ ನಿಯಂತ್ರಕ ಸೆಬಿಗೆ, ಐಪಿಒಗಾಗಿ ಸಲ್ಲಿಸಿದ ಕರಡಿನಲ್ಲಿ ಕಂಪನಿ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಎಲ್‌ಐಸಿ ಸೆಪ್ಟೆಂಬರ್ 2021 ವೇಳೆಗೆ 21,539  ಕೋಟಿ ರೂ.ಗಳಷ್ಟು ಕ್ಲೈಮ್ ಮಾಡದ ಹಣವನ್ನು ಹೊಂದಿದೆ.

ಇದರಲ್ಲಿ ಕ್ಲೈಮ್ ಮಾಡದ ಬಾಕಿ ಮೊತ್ತದ ಮೇಲೆ ಗಳಿಸಿದ ಬಡ್ಡಿ ಹಣ ಕೂಡ ಸೇರಿದೆ. ಭಾರತೀಯ ಜೀವ ವಿಮಾ ನಿಗಮ ಸಲ್ಲಿಸಿದ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ, ಕ್ಲೈಮ್ ಮಾಡದ ಮೊತ್ತವು ಮಾರ್ಚ್ 2021ರ ಅಂತ್ಯದ ವೇಳೆಗೆ 18,489 ಕೋಟಿಯಷ್ಟಿತ್ತು.

ಸೆಬಿಯ ನಿಯಮಗಳ ಪ್ರಕಾರ ಯಾವುದೇ ವಿಮಾ ಕಂಪನಿ ತನ್ನ ಜಾಲತಾಣದಲ್ಲಿ ಕ್ಲೈಮ್ ಮಾಡದ ಮೊತ್ತವನ್ನು ಪರಿಶೀಲಿಸಲು ಸೌಲಭ್ಯವನ್ನು ಒದಗಿಸಬೇಕಿದೆ. ಈ ಸೌಲಭ್ಯವನ್ನು ಎಲ್ ಐ ಸಿ ವೆಬ್ ಸೈಟ್ ನಲ್ಲಿ ಕಲ್ಪಿಸಲಾಗಿದ್ದು, ಪಾಲಿಸಿ ಹೊಂದಿರುವವರು ತಮಗೆ ಬರಬೇಕಾದ ಮೊತ್ತವಿದೆಯೇ ಎಂಬುದನ್ನು ಪರಿಶೀಲಿಸಿ ಅದನ್ನು ಕೋರುವುದಕ್ಕೆ ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!