ಇದೇನು ನೋಡುತ್ತಾ ನೋಡುತ್ತಾ 2025ನೇ ವರ್ಷವೂ ಕೊನೆಯ ಹಂತಕ್ಕೆ ಬಂದುಬಿಟ್ಟಿದೆ. ಬಹಳಷ್ಟು ಜನ ವರ್ಷದ ಆರಂಭದಲ್ಲಿ “ಈ ವರ್ಷ ಹೊಸದೇನಾದರೂ ಕಲಿಯಬೇಕು”, “ಫಿಟ್ ಆಗಬೇಕು”, “ಜೀವನದಲ್ಲಿ ಬದಲಾವಣೆ ತರಬೇಕು” ಅಂತ ರೆಸಲ್ಯೂಷನ್ ಹಾಕಿಕೊಂಡಿರಬಹುದು. ಆದರೆ ಈಗ 2 ತಿಂಗಳು ಮಾತ್ರ ಉಳಿದಿವೆ, ಹಾಗಾಗಿ “ನಾನೇನೂ ಮಾಡಲಿಲ್ಲ” ಅಂತ ಬೇಸರ ಪಡ್ತಿರಾ? ಚಿಂತೆ ಬೇಡ — ಈ ಉಳಿದ ತಿಂಗಳಲ್ಲಿ ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಿಮ್ಮ ಜೀವನದ ದಿಕ್ಕೇ ಬದಲಾಗಬಹುದು.
ವರ್ಕ್ ಹಾರ್ಡ್ — ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ
ಯಶಸ್ಸು ಅಂದ್ರೆ ಸುಲಭದ ವಿಷಯವಲ್ಲ. ನಿಮ್ಮ ಕನಸುಗಳನ್ನು ನಿಜ ಮಾಡಲು ಶ್ರಮದ ಬಲದ ಅಗತ್ಯ ಇದೆ. ಉಳಿದ ಈ ತಿಂಗಳುಗಳಲ್ಲಿ ನಿಮ್ಮ ಗುರಿ ಕಡೆಗೆ ಶಿಸ್ತಿನಿಂದ ಶ್ರಮಿಸಿ. ಇದು ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸಿ, ವೃತ್ತಿಜೀವನದಲ್ಲಿ ಹೆಚ್ಚು ಸಾಧನೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕಂಫರ್ಟ್ ಜೋನ್‌ನಿಂದ ಹೊರಬಂದು ಹೊಸ ಪ್ರಯತ್ನ ಮಾಡಿ.
ಕಲಿಕೆಯತ್ತ ಹೆಜ್ಜೆ — ಪ್ರತಿದಿನ ಹೊಸದನ್ನ ಕಲಿಯಿರಿ
ಜೀವನ ಬದಲಾಯಿಸೋ ಶಕ್ತಿಯುತ ಮಾರ್ಗವೆಂದರೆ ಕಲಿಕೆ. ಪುಸ್ತಕ ಓದುವುದು, ಆನ್‌ಲೈನ್ ಕೋರ್ಸ್‌ಗಳು ಮಾಡುವುದು ಅಥವಾ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ. ಪ್ರತಿದಿನ ಒಂದು ವಿಷಯ ಹೊಸದಾಗಿ ಕಲಿಯುವ ಅಭ್ಯಾಸ ಮಾಡಿಕೊಂಡರೆ ಆತ್ಮವಿಶ್ವಾಸವೂ, ಅವಕಾಶಗಳೂ ಎರಡೂ ಹೆಚ್ಚುತ್ತವೆ.
ಕೃತಜ್ಞತೆಯ ಮನೋಭಾವ — ಧನ್ಯತೆಯ ಶಕ್ತಿ ಅರಿಯಿರಿ
ಪ್ರತಿದಿನ ನೀವು ಕೃತಜ್ಞರಾಗಿರುವ ಮೂರು ವಿಷಯಗಳನ್ನು ಬರೆಯಿರಿ. ಈ ಸರಳ ಅಭ್ಯಾಸ ನಿಮ್ಮ ಮನಸ್ಸಿಗೆ ಶಾಂತಿ, ಹೃದಯಕ್ಕೆ ತೃಪ್ತಿ ಕೊಡುತ್ತದೆ. ನಕಾರಾತ್ಮಕ ವಿಚಾರಗಳನ್ನು ದೂರ ಮಾಡುತ್ತದೆ ಹಾಗೂ ಜೀವನದ ಸಕಾರಾತ್ಮಕ ಅಂಶಗಳತ್ತ ಗಮನ ಸೆಳೆಯುತ್ತದೆ.
ದಯೆ ಇರಲಿ — ಇತರರಿಗೆ ಸಹಾಯ ಮಾಡುವ ಹಾದಿಯಲ್ಲಿ ನಡೆಯಿರಿ
ದಯೆಯ ಸಣ್ಣ ಕಾರ್ಯಗಳು ದೊಡ್ಡ ಬದಲಾವಣೆ ತರಬಹುದು. ಇತರರಿಗೆ ಸಹಾಯ ಮಾಡಿದಾಗ ನಿಮ್ಮ ಮನಸ್ಸಿಗೂ ಶಾಂತಿ ಸಿಗುತ್ತದೆ. ಈ ಸಕಾರಾತ್ಮಕ ಕ್ರಿಯೆಗಳಿಂದ ನಿಮ್ಮ ಆತ್ಮತೃಪ್ತಿ ಹೆಚ್ಚುತ್ತದೆ ಮತ್ತು ಮಾನವೀಯ ಮೌಲ್ಯಗಳು ಗಾಢವಾಗುತ್ತವೆ. ಪ್ರತಿದಿನ ಒಂದು ಚಿಕ್ಕ ದಯೆಯ ಕೆಲಸ ಮಾಡಿದರೂ ಅದು ನಿಮ್ಮ ಬದುಕನ್ನು ಬೆಳಗಿಸುತ್ತದೆ.
ಡಿಜಿಟಲ್ ಡಿಟಾಕ್ಸ್ — ತಂತ್ರಜ್ಞಾನದಿಂದ ವಿಶ್ರಾಂತಿ ಕೊಡಿ
ಸೋಶಿಯಲ್ ಮೀಡಿಯಾ, ನೆಟ್‌ಫ್ಲಿಕ್ಸ್ ಅಥವಾ ಫೋನ್‌ನ ಅತಿಯಾದ ಬಳಕೆ ಮನಸ್ಸಿನ ಶಾಂತಿಯನ್ನು ಕದಿಯುತ್ತದೆ. ವಾರಕ್ಕೊಮ್ಮೆ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಂದ ದೂರವಿದ್ದು ನೈಸರ್ಗಿಕ ಜೀವನದ ಸೌಂದರ್ಯವನ್ನು ಅನುಭವಿಸಿ. ಈ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿ ತುಂಬುತ್ತದೆ.

