July 26, 2026
Sunday, July 26, 2026
spot_img

LIFE| ದಿನವಿಡೀ ಸೂಪರ್ ಆಕ್ಟಿವ್ ಆಗಿರಬೇಕೇ? ಮುಂಜಾನೆಯ ಈ ಸಣ್ಣ ಬದಲಾವಣೆ ಮಾಡಿ ನೋಡಿ!

ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವುದು ಅಥವಾ ಅವಸರದಿಂದ ದಿನವನ್ನು ಆರಂಭಿಸುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಆದರೆ, ಪ್ರತಿದಿನ ಮುಂಜಾನೆ ನಿಮಗಾಗಿ ಕೇವಲ 10 ನಿಮಿಷಗಳನ್ನು ಮೀಸಲಿಟ್ಟರೆ ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು. ಮುಂಜಾನೆಯ ಮೊದಲ 10 ನಿಮಿಷಗಳು ನಿಮ್ಮ ಇಡೀ ದಿನದ ಯಶಸ್ಸು ಮತ್ತು ನೆಮ್ಮದಿಯನ್ನು ನಿರ್ಧರಿಸುತ್ತವೆ.

ಮೊದಲ 2 ನಿಮಿಷ: ಕೃತಜ್ಞತಾ ಭಾವ

ಕಣ್ಣು ಬಿಟ್ಟ ತಕ್ಷಣ ಈ ಸುಂದರವಾದ ಹೊಸ ದಿನಕ್ಕಾಗಿ ಪ್ರಕೃತಿಗೆ ಧನ್ಯವಾದ ತಿಳಿಸಬೇಕು. ನಿಮ್ಮ ಜೀವನದಲ್ಲಿರುವ ಒಳ್ಳೆಯ ವಿಷಯಗಳನ್ನು ನೆನಪಿಸಿಕೊಳ್ಳಬೇಕು. ಇದು ಮನಸ್ಸಿನಲ್ಲಿ ತಕ್ಷಣವೇ ಸಕಾರಾತ್ಮಕ ಆಲೋಚನೆಗಳನ್ನು ತುಂಬುತ್ತದೆ.

2ಮುಂದಿನ 2 ನಿಮಿಷ: ಆಳವಾದ ಉಸಿರಾಟ

ಹಾಸಿಗೆಯ ಮೇಲೆ ನೇರವಾಗಿ ಕುಳಿತು 2 ನಿಮಿಷಗಳ ಕಾಲ ನಿಧಾನವಾಗಿ ಆಳವಾದ ಉಸಿರನ್ನು ತಗೆದುಕೊಕೊಂಡು ಬಿಡಬೇಕು. ಇದು ನಿಮ್ಮ ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ನೀಡಿ, ಇಡೀ ರಾತ್ರಿಯ ಆಲಸ್ಯವನ್ನು ದೂರ ಮಾಡುತ್ತದೆ.

3ಮುಂದಿನ 3 ನಿಮಿಷ: ಸ್ಟ್ರೆಚಿಂಗ್ ಮತ್ತು ನೀರು

ಮಲಗಿದ್ದಾಗ ಜಡವಾಗಿದ್ದ ಕೈಕಾಲುಗಳನ್ನು ಚೆನ್ನಾಗಿ ಚಾಚಿ ಲಘುವಾದ ಸ್ಟ್ರೆಚಿಂಗ್ ಮಾಡಿ. ನಂತರ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಿಬೇಕು. ಇದು ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಕೊನೆಯ 3 ನಿಮಿಷ: ಇಂದಿನ ಗುರಿ ನಿರ್ಧಾರ

ಇವತ್ತಿನ ದಿನದಲ್ಲಿ ನೀವು ಮಾಡಬೇಕಾದ ಅತ್ಯಂತ ಪ್ರಮುಖವಾದ 3 ಕೆಲಸಗಳು ಯಾವುವು ಎಂಬುದನ್ನು ಮನಸ್ಸಿನಲ್ಲಿಯೇ ಯೋಚಿಸಿ ನಿರ್ಧರಿಸಬೇಕು. ಇದು ನಿಮ್ಮ ದಿನಕ್ಕೆ ಒಂದು ಸ್ಪಷ್ಟವಾದ ದಿಕ್ಕನ್ನು ತೋರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !